ಖಂಡಾಳ ಗ್ರಾಮದಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ಅನೇಕರು ಪಾಲ್ಗೊಂಡಿದ್ದರು.
ಪ್ರಸ್ತುತ ವಾಲ್ಮೀಕಿ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಯುವಕರು ಧ್ವನಿ ಎತ್ತಬೇಕು ಪರಿಶಿಷ್ಟ ಪಂಗಡ ಜಾತಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡು ಕಾನೂನು ಬಾಹಿರವಾಗಿ ಸರ್ಕಾರದ ಸೌಲಭ್ಯಗಳನ್ನು ಲೂಟಿ ಮಾಡುತ್ತಿದ್ದು ಸಮಾಜದವರು ಜಾಗೃತಗೊಂಡು ಹೋರಾಟಕ್ಕೆ ಅಣಿಯಾದರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ರಾಜ್ಯ ಎಸ್.ಸಿ/ಎಸ್ ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಆಳಂದ ತಾಲೂಕಿನ ಗಡಿ ಗ್ರಾಮ ಖಂಡಾಳದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಋಷಿಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅವರು ನಾಡಿಗೆ ರಾಮಾಯಣ ಮಹಾಕಾವ್ಯ ನೀಡಿದ್ದು ಮನುಕೂಲಕ್ಕೆ ದಾರಿ ದೀಪವಾಗಿದೆ. ದೇಶ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಮಾಜ, ದೈವ ಭಕ್ತಿಗೆ ಕಣ್ಣು ಕೊಟ್ಟ ಸಮಾಜ, ಗುರು ಭಕ್ತಿಗೆ ಬೆರಳು ಕೊಟ್ಟ ಸಮಾಜ, ನಾಡ ರಕ್ಷಣೆಗಾಗಿ ಖಡ್ಗ ಹಿಡಿದ ಸಮಾಜ ಅದುವೇ ವಾಲ್ಮೀಕಿ ಸಮಾಜವಾಗಿದೆ ಎಂದರು.
ಕೇವಲ ವಾಲ್ಮೀಕಿ ಜಯಂತಿ ಆಚರಣೆ ಮಾಡಿದರೆ ಸಾಲದು ಪ್ರತಿದಿನ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ವಾಲ್ಮೀಕಿಯವರ ಇತಿಹಾಸ ಇಂದಿನ ಯುವ ಪಿಳಿಗೆಗೆ ಮುಟ್ಟಿಸುವ ಕೆಲಸವಾಗಬೇಕು. ಅವರಂತೆ ಬದುಕಲು ಕಲಿಯಬೇಕು. ಅಂದಾಗ ಮಾತ್ರ ಅವರು ರಾಮಾಯಣ ರಚಿಸಿದ್ದು ಸಾರ್ಥಕವಾಗುತ್ತದೆ. ವಾಲ್ಮೀಕಿ ಒಬ್ಬ ದಾರ್ಶನಿಕ ವ್ಯಕ್ತಿ ನಾವೆಲ್ಲರೂ ಸೇರಿ ಅವರಿಗೆ ಗೌರವ ಸಲ್ಲಿಸುವುದೇ ಈ ಜಯಂತಿ ಉದ್ದೇಶ. ಅವರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಎಂದು ಹೇಳಿದರು.
ವಾಲ್ಮೀಕಿ ಎಂದರೆ ಬೆಟ್ಟವಿದ್ದಂತೆ. ಇತಿಹಾಸದಲ್ಲಿ ಸಾಕಷ್ಟು ಸಂತರಾಗಿದ್ದಾರೆ ಆದರೆ ಅದರಲ್ಲಿ ಒಬ್ಬ ಋಷಿ ಕವಿಯಾದವರು. ವಾಲ್ಮೀಕಿಯವರು ತಮ್ಮ ಗ್ರಂಥದಲ್ಲಿ ಮೊದಲು ತನ್ನ ಹೆಸರು ಬರೆದುಕೊಳ್ಳಲಿಲ್ಲ. ಅವರು ಜೀವನವನ್ನು ಕಾಡಿನಲ್ಲೆ ಕಳೆದರು. ಸಮುದಾಯವನ್ನೆ ಮೀರಿ ಬೆಳೆದ ವ್ಯಕ್ತಿಗಳು ಆದ್ದರಿಂದ ಅವರ ಆದರ್ಶಗಳನ್ನು ರೂಡಿಸಿಕೊಳ್ಳಬೇಕಾಗಿದೆ. ವಾಲ್ಮೀಕಿಯವರಂತೆ ಮಕ್ಕಳನ್ನು ಬೆಳೆಸೋಣ. ನಾವು ಬದಲಾಗಬೇಕು ಅಂದಾಗ ನಮ್ಮ ಸುತ್ತಮುತ್ತಲಿನವರು ಬದಲಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕ್ರಾಂತಿವೀರ ಉಮಾಜಿ ನಾಯಕ ಸೇವಾ ಮಂಡಲ ಮಹಾರಾಷ್ಟ್ರ ಅಧ್ಯಕ್ಷರಾದ ವಸಂತರಾವ ಚವ್ಹಾಣ, ತಾ.ಪಂ ಮಾಜಿ ಸದಸ್ಯ ಮೋಹನಗೌಡ ಪಾಟೀಲ, ಸಮಾಜದ ಮುಖಂಡರಾದ ನಂದಕುಮಾರ ನಾಯಕ, ನಾಗನಾಥ ಪಾಟೀಲ, ಸುರೇಶ ಮಂಡ್ಲೆ, ಅಶೋಕ ಮಮ್ಮಾಳೆ, ದಶರಥ ಜಮಾದಾರ, ಸುಭಾμï ಯಳವಂತಗಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋವಿಂದ ಮಂಡ್ಲೆ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments are closed.