Shubhashaya News

ಆಳಂದನಲ್ಲಿ ಲ್ಯಾಂಡ್ ಜಿಹಾದ್ ವಿರುದ್ಧ ನಿರಂತರ ಹೋರಾಟ- ಹರ್ಷಾ ಗುತ್ತೇದಾರ

ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸ್ಥಳಕ್ಕೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಶಿವರಾಜ ಪಾಟೀಲ ರದ್ದೇವಾಡಗಿ, ದೀಲಿಪ ಪಾಟೀಲ, ಪರಮೇಶ್ವರ ಅಲಗೂಡ, ಗುಂಡಪ್ಪ ಪೂಜಾರಿ, ಕಲ್ಯಾಣಿ ಸಾವಳಗಿ ಸೇರಿದಂತೆ ಇತರರು ಇದ್ದರು.

ರಾಜ್ಯ ಸರ್ಕಾರ ಒಂದು ವರ್ಗವನ್ನು ಸಮಾಧಾನ ಪಡಿಸುವುದಕೋಸ್ಕರ ರಾಜ್ಯದ ಸರ್ಕಾರಿ ಭೂಮಿಗಳನ್ನು ವಕ್ಫ್ ಭೂಮಿ ಎಂದು ನಮೂದಿಸಲು ಆದೇಶ ನೀಡಿದೆ ಇದರ ವಿರುದ್ಧ ತಾಲೂಕಿನಲ್ಲಿ ಜನಜಾಗೃತಿ ಮೂಡಿಸಲಾಗುವುದು ಅಲ್ಲದೇ ಆಳಂದನಲ್ಲಿ ಲ್ಯಾಂಡ್ ಜಿಹಾದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ತಿಳಿಸಿದರು.
ಮಂಗಳವಾರ ತಾಲೂಕಿನ ಸಾವಳೇಶ್ವರ ಗ್ರಾಮಕ್ಕೆ ಬಿಜೆಪಿ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ಆಳಂದ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮಠ, ಮಂದಿರ, ದೇವಸ್ಥಾನ, ಸರ್ಕಾರಿ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುವ ಕಾರ್ಯ ನಡೆಯುತ್ತಿದೆ ಇದು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಸರ್ಕಾರಿ ಜಮೀನುಗಳನ್ನು ವಕ್ಫ್ ಆಸ್ತಿಗಳನ್ನಾಗಿ ಮಾಡುತ್ತಿದೆ ಎಂದು ಕಲಬುರಗಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಆಳಂದ ತಾಲೂಕಿನಲ್ಲಿ ಧ್ವನಿ ಎತ್ತಲಾಗಿದೆ. ಈ ಕುರಿತು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು ಪತ್ರಿಕಾಗೋಷ್ಟಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿರುವ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಆರೋಪಿಸಿದರು.
ಶ್ರೀರಾಮ ಮಾರುಕಟ್ಟೆ ಆವರಣದ ವಿವಾದಿತ ಮಸ್ಜೀದ್, ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಎಪಿಎಂಸಿ ಜಾಗ, ಹಳೆಯ ಅನ್ಸಾರಿ ಮೋಹಲ್ಲಾದಲ್ಲಿರುವ ಸರ್ಕಾರಿ ಗ್ರಂಥಾಲಯ ಕಟ್ಟಡ ಸೇರಿದಂತೆ ಅನೇಕ ಆಸ್ತಿಗಳನ್ನು ಕೂಡ ಪುರಸಭೆ ಮುಖ್ಯಾಧಿಕಾರಿ ವಕ್ಫ್ ಆಸ್ತಿ ಎಂದು ನಮೂದಿಸುತ್ತಿದ್ದಾರೆ. ಸಾರ್ವಜನಿಕರ ಗಮನಕ್ಕೆ ತರದೇ ಹಳೆಯ ದಿನಾಂಕವನ್ನು ನಮೂದಿಸಿ ನೋಟೀಸ್ ಹೊರ ತಂದಿದ್ದಾರೆ ನೋಟಿಸ್‍ಗೆ ಆಕ್ಷೇಪಣೆ ಸಲ್ಲಿಸಲು ಕೇವಲ 7 ದಿನ ಕಾಲಾವಕಾಶ ನೀಡಿದ್ದಾರೆ ಇದರ ಕುರಿತು ಯಾವ ಪುರಸಭೆಯ ಸದಸ್ಯರ ಗಮನಕ್ಕೂ ತಂದಿಲ್ಲ ಎಂದು ದೂರಿದರು.
ಪಟ್ಟಣದಲ್ಲಿ ಮಾತ್ರವಲ್ಲದೇ ಈಗ ಮಾದನಹಿಪ್ಪರ್ಗಾ ಕಂದಾಯ ವಲಯದ ಸಾವಳೇಶ್ವರ ಗ್ರಾಮದ ಸರ್ವೇ ನಂ 2ರ 1 ಏಕರೆ 34 ಗುಂಟೆ ಬೀರದೇವರ ದೇವಸ್ಥಾನ, ಖಜೂರಿ ವಲಯದ ತೀರ್ಥ ಗ್ರಾಮದ ಸರ್ವೇ ನ.4ರ 11 ಏಕರೆ 4 ಗುಂಟೆಯ ಜಮೀನಿನ ಹಕ್ಕು ಮತ್ತು ಋಣಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದಾರೆ ಅಲ್ಲದೇ ನಾಗರಿಕರಿಗೆ ಗೊತ್ತಿಲ್ಲದಂತೆ ಹಲವು ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಬಿಂಬಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಆಳಂದ ಪಟ್ಟಣ ಮತ್ತು ಗ್ರಾಮೀಣ ಭಾಗದ ರೈತರು ತಮ್ಮ ಜಮೀನು, ಸರ್ಕಾರಿ, ದೇವಸ್ಥಾನ, ಮಠ, ಮಂದಿರಗಳ ಜಾಗಗಳ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ತಮ್ಮನ್ನು ಸಂಪರ್ಕಿಸಿಬೇಕು ಅಲ್ಲದೇ ತಾವು ಇದಕ್ಕೆ ಕಾನೂನು ತಜ್ಞರ ತಂಡದೊಂದಿಗೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ನಿಯೋಗದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ ಮಾಜಿ ಸದಸ್ಯ ದೀಲಿಪ ಪಾಟೀಲ, ಮುಖಂಡರಾದ ಗುಂಡಪ್ಪ ಪೂಜಾರಿ, ಪರಮೇಶ್ವರ ಅಲಗೂಡ, ಕಲ್ಯಾಣಿ ಸಾವಳಗಿ, ಬಾಲಾಜಿ ಘೋಡಕೆ, ಸತೀಶ ಖಜೂರೆ ಸೇರಿದಂತೆ ಇತರರು ಇದ್ದರು.

Comments are closed.

Don`t copy text!