ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ನ.11ರಿಂದ 14ವರೆಗೆ ಭಾರತ ಸೇವಾದಳ ತಾಲೂಕು ಸಮಿತಿ ಹಾಗೂ ಶ್ರೀ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ವಸತಿ ಸಹಿತ ನಾಯಕತ್ವ ತರಬೇತಿ ಶಿಬಿರವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸೇವಾದಳ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ ಅವರು ತಿಳಿಸಿದ್ದಾರೆ.
ಶಿಬಿರದಲ್ಲಿ ಸಂಪನ್ಮೂಲವ್ಯಕಿಯಾಗಿ ಭಾರತ ಸೇವಾದಳ ರಾಜ್ಯ ಸಂಪನ್ಮೂಲ ವ್ಯಕ್ತಿ ಜಯಪ್ರಕಾಶ ಕಟ್ಟಿಮನಿ, ಲಕ್ಷ್ಮೀಕಾಂತ ರ್ಯಾಕಾ, ರತ್ನಮ್ಮ ಕುದರಿ, ಲಕ್ಷ್ಮೀಂಪುತ್ರ ಪೂಜಾರಿ, ವೀರಭದ್ರಪ್ಪ ಹಾರಕಿ, ಗುರುಲಿಂಗಯ್ಯಾ ಸ್ವಾಮಿ, ಶರಣಬಸಪ್ಪ ವಡಗಾಂವ ಅವರು ಮಕ್ಕಳಿಗೆ ನಾಯಕತ್ವ ತರಬೇತಿ ನೀಡಲಿದ್ದಾರೆ ಎಂದರು.
ಮಕ್ಕಳಿಗೆ ರಾಷ್ಟ್ರ ಧ್ವಜ ಕಟ್ಟುವ ತರಬೇತಿ, ಪಥ ಸಂಚಲನ, ಯೋಗ, ಸಾಬಿನಯ ಗೀತೆ, ಲೇಜಿಮ್, ನೃತ್ಯ, ಡಂಬೆಲ್ಸ್, ಹೋಪ್ಸ್, ಲಾಟಿ ಕವಾಯತ ಸೇರಿದಂತೆ ಶಿಸ್ತಿ ಮತ್ತು ಸಂಸ್ಕಾರ ದೇಶಾಭಿಮಾನ ದೇಶ ಭಕ್ತಿಯ ಕುರಿತು ಬೋಧಿಸಲಾಗುವುದು. ಈ ಶಿಬಿರದಲ್ಲಿ ನೆರೆ ಹೊರೆಯ ಗ್ರಾಮಗಳ ಶಾಲೆಯ ವಿದ್ಯಾರ್ಥಿಗಳನ್ನು ಕಳಹಿಸಿಕೊಡಲು ಶಾಲೆಯ ಮುಖ್ಯಸ್ಥರು ಕ್ರಮವಹಿಸಿ ಶಿಬಿರದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
Comments are closed.