Shubhashaya News

12 ವರ್ಷದಿಂದ ಕರಾಟೆ ತರಬೇತಿ ನೀಡಿತ್ತಿದ್ದ ಕೋಚ್‍ಗಳು ಬೀದಿಗೆ: ಆಕ್ರೋಶ

ಆಳಂದ: ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿದಾರ ಮಹಿಂದ್ರ ಕ್ಷೀರಸಾಗರ ತರಬೇತಿ ನೀಡಿದ ಸಾಂದÀರ್ಭಿಕ ಚಿತ್ರ.

ಆಳಂದ: ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಯ ಸಂಘದ ಆಶ್ರಯದಲ್ಲಿ ಜಿಲ್ಲೆಯ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲಿ ನಡೆಯುವ ಎಲ್ಲಾ ವಸತಿ ಶಾಲೆಗಳಲ್ಲಿ ಸುಮಾರು 12 ವರ್ಷಗಳಿಂದ ಗೌರವಧನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಕರಾಟೆ ಪುರುಷ ತರಬೇತಿದಾರರನ್ನು ಹಠಾತಾಗಿ ಕೈಬಿಟ್ಟು ಪ್ರಸಕ್ತ ಸಾಲಿಗೆ ಮಹಿಳಾ ತರಬೇತಿದಾರರ ನಿಯೋಜನೆಗೆ ಮುಂದಾಗಿರುವ ಜಿಲ್ಲೆಯ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾÀಗಿದೆ.
ರಾಜ್ಯದ ಯಾವುದೇ ಜಿಲ್ಲೆಯ ಶಾಲೆಗಳಲ್ಲಿ ಮಹಿಳಾ, ಪುರುಷ ಕರಾಟೆ ತರಬೇತಿದಾರರು ನೇಮಿಸುವ ಕುರಿತಾದ ತಾರತಮ್ಮ ಮಾಡಿಲ್ಲ. ಆದರೆ ಕಲಬುರಗಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾತ್ರ ಈ ಬಾರಿ ಮಹಿಳಾ ಕರಾಟೆ ತರಬೇತಿದಾರರಿಗೆ ಮಾತ್ರ ನೇಮಿಸಿಕೊಳ್ಳಬೇಕು ಎಂದು ಆಯಾ ಶಾಲೆಯ ಪ್ರಾರ್ಚಾರರಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಶಾಲೆಗಳ ಪ್ರಾಚಾರ್ಯರು ಮಹಿಳಾ ತರಬೇತಿದಾರರನ್ನೇ ಅರ್ಜಿ ಅಹ್ವಾನಿಸಿ, ನಮಗೆ ಅನ್ಯಾಯವಾಗುವಂತೆ ಮಾಡಿದ್ದಾರೆ ಪರುಷು ತರಬೇತಿದಾರರು ಅಳಲು ತೋಡಿಕೊಂಡಿದ್ದಾರೆ.
ಕಳೆದ 12 ವರ್ಷಗಳಿಂದ ಯಾವುದೇ ತೊಂದರೆ ಆಗದಂತೆ ಶಾಲೆಗಳಿಗೆ ಹೋಗಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಾ ಬಂದಿರುವ ಜಿಲ್ಲೆಯ ಕರಾಟೆ ತರಬೇತಿದಾರರಿಗೆ ಹಠಾತಾಗಿ ಕೈಬಿಡುವ ಮೂಲಕ ಅಧಿಕಾರಿಗಳ ನಮ್ಮ ಹೊಡೆಯ ಮೇಲೆ ಹೊಡೆದು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗ ಮಹಿಳಾ ಕರಾಟೆ ತರಬೇತಿದಾರರಿಗೆ ಅರ್ಜಿ ಅಹ್ವಾನಿಸಿದ್ದ ಗ್ರಾಮೀಣ ಭಾಗದ ಬಹುತೇಕ ಎಲ್ಲೂ ಮಹಿಳಾ ತರಬೇತಿದಾರರಿಲ್ಲ. ಅರ್ಜಿ ಬಂದಿಲ್ಲ ಎಂದು ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸದೇ ದಿನದೊಡುವ ತಂತ್ರವಾಗಿದೆ. ಹಿಂದಿನಿಂದಲೂ ಯಾವುದೇ ತೊಂದರೆ ಇಲ್ಲದೆ ಕರಾಟೆ ತರಬೇತಿಯಂತ ಕಾರ್ಯನಿರ್ವಹಿಸುತ್ತ ಬಂದಿರುವ ಪುರುಷ ಕರಾಟೆ ತರಬೇತಿದಾರರೀಗೆಕೆ ಈ ಬಾರಿ ಹಠಾತಾಗಿ ರಾಜ್ಯದ ಪೈಕಿ ಕಲಬುರಗಿ ಜಿಲ್ಲೆಯಲ್ಲೇ ಮಾತ್ರ ಏಕೆ ಕೈಬಿಡಲಾಗುತ್ತಿದೆ ಎಂದು ಪ್ರಶ್ನೆ ಪುರುಷ ತರಬೇತಿದಾರರು ಪ್ರಶ್ನಿಸಿ ಹರಿಹಾಯ್ದರು.
ಏನಿದು ಪ್ರಕರಣ: ಜಿಲ್ಲೆಯ ಹಲವಡೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಆಯಾ ಶಾಲೆಗಳು ನಡೆಯುವ ಕಸ್ತೂರಬಾ ಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ವಸತಿ, ಮೂರಾರ್ಜಿ ದೇಸಾಯಿ, ಬಿಸಿಎಂ ವಸತಿ ನಿಲಯ ಹಾಗೂ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಲ್ಲಿ ಸುಮಾರು 12 ವರ್ಷಗಳಿಂದ ಕರಾಟೆ ತರಬೇತಿ ನೀಡಿದ ತರಬೇತಿದಾರಿಗೆ ಕಲಬುರಗಿ ಜಿಲ್ಲೆಯಲ್ಲೇ ಮಾತ್ರ ಈ ಬಾರಿ ಕೈಬಿಡಲಾಗಿದೆ.
ಹೋರಾಟ ಕೈಗೊಳ್ಳುತ್ತೇವೆ: ಈಗಾಗಲೇ ಕರಾಟೆ ತರಬೇತಿ ನೀಡಿದ ಶಿಕ್ಷಕರಿಗೆ ಇಲಾಖಾಯಿಂದ ಅರ್ಧ ವೇತನ ಪಾವತಿ ಮಾಡಿ ಇನ್ನರ್ಧ ವೇತನ ನೀಡದೆ ಕಡೆಗಣಿಸಿ ಹೊಸ ಕರಾಟೆ ಮಹಿಳಾ ಶಿಕ್ಷಕರ ನೇಮಕಕ್ಕೆ ಮುಂದಾದ ಅಧಿಕಾರಿಗಳ ಹಾಗೂ ವಸತಿ ಶಾಲೆಯ ಶಿಕ್ಷಕರು ನಮಗೇ ನ್ಯಾಯ ಕೊಡದೇ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ.
ಮಹಿಂದ್ರ ಕ್ಷೀರಸಾಗರ ಆಳಂದ, ಜಟ್ಟಪ್ಪಾ ಪೂಜಾರಿ ಜೇವರ್ಗಿ, ಕರಾಟೆ ತರಬೇತಿ ಶಿಕ್ಷಕರು, ಬ್ಲ್ಯಾಕ್ ಬೆಲ್ಟ್

Comments are closed.

Don`t copy text!