Shubhashaya News

ವಸತಿ ಶಾಲಾ ಮಕ್ಕಳಿಗೆ ಪುಷ್ಪವೃಷ್ಟಿ ಮೂಲಕ ದಿನಾಚರಣೆ

ಆಳಂದ: ಖಜೂರಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ಸಿಬ್ಬಂದಿಗಳು ಮಕ್ಕಳನ್ನು ಪುಷ್ಪವೃಷ್ಟಿ ಮೂಲಕ ಸ್ವಾಗತಿಸಿದರು.

ಆಳಂದ: ತಾಲೂಕಿನ ಖಜೂರಿ ಗ್ರಾಮದ ಹೊರವಲಯದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಆರಂಭದಲ್ಲಿ ಶಾಲಾ ವಿದ್ಯಾಥಿಗಳನ್ನು ಶಾಲೆಯ ಶಿಕ್ಷಕರು ಹೂಮಳೆ ಗೈದು ಸ್ವಾಗತಿಸಿದರು.
ಬಳಿಕ ನಡೆದ ವೇದಿಕೆಯ ಕಾರ್ಯಕ್ರಮದಲ್ಲೂ ಮಕ್ಕಳನ್ನು ಕೂಡಿಸಿ ಹೂಗಳಿಂದ ಸ್ವಾಗತ ಮಾಡಲಾಯಿತು. ವಿದ್ಯಾರ್ಥಿಗಳಿಂದಲೇ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಕ್ರೀಡಾಕೂಟ ಮತ್ತು ಮನರಂಜನೆ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಬಬಲೇಶ್ವರ ಗ್ರಾಮದ ಮಹದೇವ ಕಾಂಬಳೆ ಆಗಮಿಸಿ ವಸತಿ ಶಾಲೆಯ ಹಾಗೂ ಶಿಕ್ಷಕರ ಬಗ್ಗೆ ಶಾಲೆ ವಾತಾವರಣ ಮತ್ತು ಊಟದ ಸುವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಗೆ ಬರುವ ಪಾಲಕರಿಗೆ ಕುಳಿತುಕೊಳ್ಳಲು ಆಸನಗಳು ದೇಣಿಗೆ ನೀಡುವುದಾಗಿ ಹೇಳಿದರು. ಪ್ರಾಚಾರ್ಯ ಶಾಮರಾವ್ ಅರವತ್ತು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ಮಾತ್ರ ಬದಲಾವಣೆ ಆಗಲು ಸಾಧ್ಯವಿದೆ. ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಹೇಳಿದರು.
ಸಹ ಶಿಕ್ಷಕ ಗುರುಶಾಂತಪ್ಪ ಪಾಟೀಲ್ ಮಾತನಾಡಿ, ಮಾಜಿ ಪ್ರಧಾನಿ ಪಂಡಿತ್ ಜವರಲಾಲ ನೆಹರು ಅವರ ಜೀವನ ಸಾಧನೆಗಳ ಬಗ್ಗೆ ತಿಳಿಸಿದರು.
ವಸತಿ ನಿಲಯ ಪಾಲಕ ಸದ್ದಾಂ ನದಾಫ್. ದೈಹಿಕ ಶಿಕ್ಷಕರಾದ ಪುಂಡಲಿಂಗ ಪೂಜಾರಿ. ಲಕ್ಷ್ಮಣ ಸಲ್ಗರ್ ಬಸವರಾಜ್ ಮಲ್ಲಮ್ಮ ಗೋಳಾ ಸುವರ್ಣ ತೂಳನೂರ್, ಜ್ಯೋತಿ ಹರ್ಸೂರ್ ಯೂನಸ್ ಆಲಿ ಹಾಜರಿದ್ದರು. ಪುಂಡಲಿಂಗ ಸ್ವಾಗತಿಸಿದರು, ಗೀತಾ ನಿರೂಪಿಸಿದರು.

Comments are closed.

Don`t copy text!