ಆಳಂದ: ದೇವಂತಗಿ ಗ್ರಾಮದಲ್ಲಿ ಆಚರಿಸಿದ ಭಕ್ತ ಕನಕದಾಸರ ಜಯಂತಿಯಲ್ಲಿ ಗುಂಡು ಪಾಟೀಲ, ವಿಠ್ಠಲ ದೊಡ್ಮನಿ, ರಾಜೇಂದ್ರ ಪರಿಟ್ ಅವರು ದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು.
ಆಳಂದ: ತಾಲೂಕಿನ ದೇವಂತಗಿ ಗ್ರಾಮದಲ್ಲಿ ಸರ್ವರು ಸೇರಿ ದಾಸ ಶ್ರೇಷ್ಠ ಭಕ್ತಕನಕದಾಸರ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಗಳ ಸ್ಮರಿಸಿ ಭಕ್ತಿಯಿಂದ ನಮನ ಸಲ್ಲಿಸಿದರು.
ಆರಂಭದಲ್ಲಿ ಕನಕದಾಸರ ಭಾವ ಚಿತ್ರಕ್ಕೆ ವಿಠ್ಠಲ್ ದೊಡ್ಮನಿ, ರಾಜೇಂದ್ರ ಪರಿಟ್, ಗುಂಡು ಪಾಟೀಲ್ ಪೂಜೆ ನೆರವೇರಿಸಿ ಮಾತನಾಡಿದ ಮುಖಂಡರು, ಕನಕದಾಸರು ಹೇಳಿಕೊಟ್ಟಿರುವಂತಹ ಕುಲಕುಲ ಎಂದು ಹೊಡೆದಾಡುವಿರಿ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಪ್ರಶ್ನಿಸುವ ಮೂಲಕ ಜಾತಿಯತೆ ಬುಡ ಸಮೇತ ಕಿತ್ತು ಹಾಕಿಬೇಕು. ಎಲ್ಲರೂ ಸಾಹಾರ್ದತೆ ಸಮಾನತೆಯಿಂದ ಅಣ್ಣ ತಮ್ಮಂದಿರ ಹಾಗೆ ಬಾಳಬೇಕು ಎಂದು ಹೇಳಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣಾ ಎಂದು ನುಡಿದರು.
ಗುಂಡು ಪಾಟೀಲ್ ಅವರಿಗೆ ದತ್ತಪ್ಪ ದೊಡ್ಡಮನಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಶೈಲ ನೈಕೋಡಿ, ಶಿವಕುಮಾರ್ ಚಿಂಚೋಳಿ, ಶರಣುಕುಮಾರ್ ಚಿಂಚೋಳಿ, ರಾಜೇಂದ್ರ ಪರಿಟ್ ದತ್ತಪ್ಪ ದೊಡ್ಮನಿ, ಧರ್ಮ ಕಾಂಬಳೆ, ಗುರುಶರಣ ನಾಯ್ಕೋಡಿ, ಕಲ್ಯಾಣರಾವ ಪಾಟೀಲ್, ಚಂದ್ರಕಾಂತ್ ಚಿಂಚೋಳಿ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.
Comments are closed.