Shubhashaya News

`ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಕೃತಿ ಲೋಕಾರ್ಪಣೆ

ಕಲಬುರಗಿ: ಬೆಂಗಳೂರಿನಲ್ಲಿ ನಡೆದ ಆರನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಲಕ್ಷ್ಮೀಕಾಂತ ಮೊಹರೀರ ಅವರ `ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಕೃತಿಯನ್ನು ಹಂಪಿ ಕನ್ನಡ ವಿ.ವಿ. ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಬಿಡುಗಡೆಗೊಳಿಸಿದರು.

 

ಕಲಬುರಗಿ: ಬೆಂಗಳೂರಿನಲ್ಲಿ ನಡೆದ ಆರನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಹಿರಿಯ ದಾಸಸಾಹಿತ್ಯ ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಜೀವನ, ಸಾಧನೆ, ಕೊಡುಗೆಗಳ ಕುರಿತು ಕಲಬುರಗಿಯ ಸಂಸ್ಕøತಿ ಚಿಂತಕ, ಸಾಹಿತಿ ಡಾ. ಲಕ್ಷ್ಮೀಕಾಂತ ಮೊಹರೀರ ಅವರು ರಚಿಸಿರುವ `ಮಹತ್ತನ್ನು ಚಿಂತಿಸು ಬೃಹತ್ತನ್ನು ಸಾಧಿಸು’ ಕೃತಿ ಲೋಕಾರ್ಪಣೆಗೊಂಡಿತು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಶ್ರೀ ಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದಂಗಳವರು, ಎಚ್.ಬಿ. ಲಕ್ಷ್ಮೀನಾರಾಯಣಾಚಾರ್ಯ, ಹ.ರಾ. ನಾಗರಾಜಾಚಾರ್ಯ, ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಮತ್ತಿತರ ಗಣ್ಯರು ಇದ್ದರು.
ನಾಡಿನ ಬಹುಶ್ರುತ ವಿದ್ವಾಂಸರಾದ ಡಾ. ಅರಳುಮಲ್ಲಿಗೆಯವರ ವ್ಯಕ್ತಿತ್ವ, ಸಾಧನೆ ಮತ್ತು ಜೀವನದ ನಾನಾ ಮಜಲುಗಳನ್ನು ಡಾ. ಲಕ್ಷ್ಮೀಕಾಂತ ಮೊಹರೀರ ಅವರು ಈ ಕೃತಿಯಲ್ಲಿ ವಿಸ್ತøತವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. ಸದ್ಭಾವನೆ, ಸದ್ವಿಚಾರ, ಸಾಮಾಜಿಕ ಕಳಕಳಿ, ಜೀವನೋತ್ಸಾಹ, ಜ್ಞಾನತೃಷೆ, ಸಾಧಿಸುವ ಛಲಗಳೆಲ್ಲ ಕೃತಿಯಲ್ಲಿ ಸ್ಪಂದಿಸಿವೆ ಎಂದು ಕೃತಿಯ ಕುರಿತು ವಸುಧೇಂದ್ರ ಸಿರವಾರ ಹೇಳಿದರು.

Comments are closed.

Don`t copy text!