ಸಿಫಾರಸ್ಸಿಗೆ ಸ್ಪಿಂಕಲರ್ ಪೈಪ್ ಹಂಚಿದ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯ
ಜಂಟಿ ನಿರ್ದೇಶಕರಿಗೆ ಪತ್ರ ಬರೆದ ಹರ್ಷಾನಂದ ಗುತ್ತೇದಾರ
ಆಳಂದ: ತಾಲೂಕಿನ ರೈತರಿಗೆ ಕೃಷಿ ಇಲಾಖೆ ಮೂಲಕ ಸಹಾಯಧನಲ್ಲಿ ನೀಡಲಾಗುವ ಸ್ಪ್ರಿಂಕಲರ್ ಪೈಪುಗಳನ್ನು ಅರ್ಹರಿಗೆ ನೀಡದೆ ನಿಮಗಳನ್ನು ಗಾಳಿಗೆ ತೂರಿದ ಸಹಾಯಕ ಕೃಷಿ ನಿರ್ದೇಶಕರು ಒಳಗೊಂಡು ಖಜೂರಿ ಮತ್ತು ನಿಂಬರಗಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಕೂಡಲೇ ಅಮಾನತು ಕೈಗೊಳ್ಳಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಕಲಬುರಗಿ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಶಾಸಕರ ಸೀಫಾರು ಪತ್ರ ಹಾಗೂ ಆರ್‍ಕೆ ಪಾಟೀಲ ಅವರ ಸೂಚಿಸಿದವರಿಗೆ ಮಾತ್ರ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ನಿಯಮಗಳನ್ನು ಮೀರಿ ಸ್ಪ್ರಿಂಕಲರ್ ಪೈಪುಗಳನ್ನು ವಿತರಿಸಲು ಅವಕಾಶ ಮಾಡಿಕೊಟ್ಟಿರುವ ಆಳಂದ ತಾಲೂಕಿನ ಅಧಿಕಾರಿಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಆಳಂದ ತಾಲೂಕಿನ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು ರೈತರಿಗೆ ಸಿಗಬೇಕಾದ ಸ್ಪ್ರಿಂಕಲರ್ ಪೈಪುಗಳನ್ನು ಶಾಸಕರ ಕಾರ್ಯಾಲಯದಿಂದ ಶಿಫಾರಸ್ಸು ಪತ್ರ ಮತ್ತು ಶಾಸಕರ ಸಹೋದರನ ಮಗ ಆರ್ ಕೆ ಪಾಟೀಲ ಶಿಫಾರಸ್ಸು ಮಾಡಿದ ವ್ಯಕ್ತಿಗಳಿಗೆ ಮಾತ್ರ ವಿತರಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
2024ನೇ ಸಾಲಿಗಿಂತ ಮುಂಚೆ ಅರ್ಜಿ ಹಾಕಿದ ರೈತರ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಅಲ್ಲದೇ ಸರ್ಕಾರದ ಗೋದಾಮಿನಲ್ಲಿ ಇರಬೇಕಾದ ಸ್ಪ್ರಿಂಕಲರ್ ಪೈಪುಗಳನ್ನು ಖಾಸಗಿ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ಇಟ್ಟು ಅಲ್ಲಿ ಚೀಟಿ ಕೊಟ್ಟ ರೈತರಿಗೆ ಮಾತ್ರ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ದಿನಾಂಕ 9ನೇ ನವೆಂಬರ್ 2024 ರಂದು ಮಟಕಿ ಗ್ರಾಮದಲ್ಲಿ ಹಾಗೂ ದಿ. 18ನೇ ನವೆಂಬರ್ 2024ರಂದು ಯಳಸಂಗಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್. ಕೆ. ಪಾಟೀಲ ಅವರು ಸ್ಪ್ರಿಂಕಲರ್ ಪೈಪುಗಳನ್ನು ವಿತರಿಸಿದ್ದಾರೆ. ಇದು ಕ್ಷೇತ್ರದ ಶಾಸಕರು ಮಾಡಬೇಕಾದ ಕೆಲಸ ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಇಲಾಖೆಯ ಹಾಗೂ ಸರ್ಕಾರದ ನಿಯಮಗಳನ್ನು ಮೀರಿ ಆಳಂದ ತಾಲೂಕಿನಲ್ಲಿ ಆರ್ ಕೆ ಪಾಟೀಲ ಮೂಲಕ ಪೈಪುಗಳನ್ನು ತಮಗೆ ಬೇಕಾದವರಿಗೆ ವಿತರಿಸಿ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾg ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಸ್ಪ್ರಿಂಕಲರ್ ಪೈಪುಗಳನ್ನು ವಿತರಿಸಲು ಅವಕಾಶ ಮಾಡಿಕೊಟ್ಟ ಆಳಂದ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಖಜೂರಿ ರೈತ ಸಂಪರ್ಕ ಕೇಂದ್ರದ ಬಿ ಎಂ ಬಿರಾದಾರ, ನಿಂಬರ್ಗಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಮಾನತ್ತು ಮಾಡಬೇಕು ಹಾಗೂ ಕೂಡಲೇ ಸ್ಪ್ರಿಂಕಲರ್ ಪೈಪುಗಳನ್ನು ವಿತರಿಸುವುದನ್ನು ನಿಲ್ಲಿಸಬೇಕು ಅಲ್ಲದೇ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Comments are closed.