Shubhashaya News

ನೌಕರ ಸಂಘದ ಅಧ್ಯಕ್ಷರ ಪದಗ್ರಹಣ

ನೌಕರರ ಹಿತಾಸಕ್ತಿ ಕಾಪಾಡಿ ಪರಿಹಾರಕ್ಕೆ ಶ್ರಮಿಸುವೇ: ಸನ್ಮೂಖ

ಆಳಂದ: ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸತೀಷ ಸನ್ಮ್ಮೂಖ, ಬಸವರಾಜ ಚಿಣಗೆ, ನಾಗೇಂದ್ರ ಗಾಡೆ ಅಧಿಕಾರ ವಹಿಸಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಇತರರು ಸನ್ಮಾನಿಸಿದರು.

ಆಳಂದ: ತಮ್ಮ ನೇತೃತ್ವದಲ್ಲಿ ಸಂಘದ ನೌಕರರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕಲು ಶ್ರಮಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ನೂತನ ಅಧ್ಯಕ್ಷ ಸತೀಷ ಸನ್ಮೂಖ ಅವರು ಹೇಳಿದರು.
ಪಟ್ಟಣದ ರಾಜ್ಯ ಸರ್ಕಾರಿ ನೌಕರ ಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರವಧಿಯಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಸಮನ್ವಯ ಸಾಧಿಸಲು, ನೌಕರರ ಹಕ್ಕುಗಳ ರಕ್ಷಣೆಗೆ ಹಾಗೂ ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಬದ್ಧರಾಗಿರುವುದಾಗಿ ಹೇಳಿದರು. ನೌಕರರು “ನಾವು ಒಂದಾಗಿ ಕೆಲಸ ಮಾಡಿದರೆ, ಯಾವ ರೀತಿಯ ಸವಾಲುಗಳಾದರೂ ದಾಟಬಹುದು” ಎಂದು ಅವರು, ಸಂಘಕ್ಕೆ ವಿವಿಧ ಇಲಾಖೆಯ ಮೂಲಕ ಚುನಾವಣೆ ಮತ್ತು ಅವಿರೋಧ ಸೇರಿ 30 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಬರುವ ದಿನಗಳಲ್ಲಿ ಇನ್ನೂಳಿದ ಪದಾಧಿಕಾರಿ ಹುದ್ದೆಗಳನ್ನು ನೇಮಿಸಿಕೊಳ್ಳಲಾಗುವುದು. ಎಲ್ಲರ ಸಹಕಾರದಿಂದ ಮಾದರಿಯ ಸಂಘವನ್ನು ಮಾಡುವುದಾಗಿ ಅವರು ಹೇಳಿದರು.
ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಮಾತನಾಡಿ ನೂತನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರೆ ಸಾಲದು ನೌಕರರ ಬೇಕು ಬೇಡಿಕೆಗಳಿಗೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಸರ್ವರು ಮುನ್ನೆಡೆಯಬೇಕು ಹಾಗೂ ನೂತನ ಪದಾಧಿಕಾರಿಗಳಿಗೆ ಸರ್ವರು ಸಹಕರಿಸಬೇಕು ಎಂದು ಹೇಳಿದರು.
ರಾಜ್ಯಪರಿಷತ್ ಸದಸ್ಯ ನಾಗೇಂದ್ರ ಗಾಡೆ, ಖಜಾಂಚಿ ಬಸವರಾಜ ಚಿಣಗೆ, ಅವರು ಸಹ ಸನ್ಮಾನಿಸಿ ಪ್ರಮಾಣ ಪತ್ರವನ್ನು ನೀಡಲಾಯಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಡಾ. ಮಹಾಂತೇಶ ಪಾಟೀಲ, ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಡಾ. ಮಹಾಂತಪ್ಪ ಹಾಳಮಳಿ, ಮರೆಪ್ಪ ಬಡಿಗೇರ, ವೆಂಕಟೇಶ ಮರಾಠೆ, ನರಸಪಾ ಬಿರಾದಾರ, ಚಂದ್ರಶೇಖರ ಪೂಜಾರಿ, ರಮೇಶ ಮಾಡಿಯಾಳಕರ್, ಮಲ್ಲಿಕಾರ್ಜುನ ಖಜೂರಗಿ, ಶಿಕ್ಷಕಿ ಸೈಲಜಾ ಪೋಮಾಜಿ, ಮಾಣಿಕ ಜಾಧವ, ಶ್ರೀಶೈಲ ಕಂಬಾರ, ಚಂದ್ರಕಾಂತ ಪೂಜಾರಿ, ಡಾ. ಯಲ್ಲಪ್ಪ ಇಂಗಳೆ, ಸುಮಿತ್ರಾ, ಈರಣ್ಣಾ ನರೋಣಾ, ಶಿವಯೋಗಪ್ಪ ಟಕ್ಕಳಕಿ, ಎಲ್.ಎಸ್.ಬೀದಿ, ಮತ್ತಿತರರು ಇದ್ದರು. ನೌಕರ ಸಂಘದ 30 ನಿರ್ದೇಸಕರನ್ನು ಸನ್ಮಾನಿಸಿ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.

Don`t copy text!