ಆಳಂದ: ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಹಿರಿಯ ಮುಖ್ಯ ವೈದಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರನ್ನು ತಾತ್ಕಾಲಿಕವಾಗಿ ತಾಲೂಕು ಆರೋಗ್ಯಾಧಿಕಾರಿಯನ್ನಾಗಿ ನಿಯೋಜಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆದೇಶಿಸಿದ್ದಾರೆ.
ಆರೋಗ್ಯಾಧಿಕಾರಿ ಆಗಿದ್ದ ಡಾ. ಸುಶೀಲಕುಮಾರ ಅಂಬರೆ ಅವರ ಈಚೆಗೆ ಅಮಾನತಾದ ಬಳಿಕ ಖಾಲಿ ಜಾಗಕ್ಕೆ ಪ್ರಭಾರಿಯನ್ನಾಗಿ ಡಾ. ಮಹಾಂತಪ್ಪ ಹಾಳಮಳಿ ಅವರನ್ನು ನಿಯೋಜಿಸಿದ್ದ ಹಿನ್ನೆಲೆಯಲ್ಲಿ ನ. 17ರಂದು ಹಾಳಮಳಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಹಾಳಮಳಿ ಅವರು ಸಾರ್ವಜನಿಕ ಆಸ್ಪತ್ರೆಯ ಅತ್ಯುತ್ತಮ ಕಾರ್ಯವೈಖರಿಯಿಂದ ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಗಮನ ಸೆಳೆಯುವಂತೆ ಮಾಡಿದ್ದರು. ಈಗ ಮತ್ತೊಂದು ಜವಾಬ್ದಾರಿ ಪ್ರಭಾರಿ ಆರೋಗ್ಯಾಧಿಕಾರಿ ಹುದ್ದೆ ವಹಿಸಿಕೊಂಡಿರುವ ಅವರನ್ನು ಇರುವ ದಿನಗಳವರೆಗೆ ತಾಲೂಕು ಆರೋಗ್ಯ ಇಲಾಖೆಯಲ್ಲಿನ ವ್ಯವಸ್ಥೆಯನ್ನು ಸುಧಾರಣೆ ತರಲಿದ್ದಾರೆ ಎಂದು ಸಿಬ್ಬಂದಿಗಳ ಹಾಗೂ ಸಾರ್ವಜನಿಕ ವಲಯದಲ್ಲಿ ಭರವಸೆ ಮೂಡಿದೆಯಾದರು ಕಾದುನೋಡುವಂತೆ ಮಾಡಿದೆ.
Comments are closed.