ಆಳಂದ: ಬಿಪಿಎಲ್ ಕಾರ್ಡ್ ವಂಚಿತರಾಗಿದ್ದ ಈಶ್ರಮ ಕಾರ್ಡ್ ಹೊಂದಿದ ಕಾರ್ಮಿಕರನ್ನು ಗುರುತಿಸಿ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳು ಬಿಪಿಎಲ್ ಕಾರ್ಡ್ ವಿತರಿಸಿದರು.
ಆಳಂದ: ರಾಜ್ಯದಲ್ಲಿರುವ ಕೆಲವು ಬಿಪಿಎಲ್ ಕಾರ್ಡ್‍ದಾರರಿಗೆ ರಾಜ್ಯ ಸರ್ಕಾರ ಸದ್ದಿಲ್ಲದೆ ಎಪಿಎಲ್ ಶಾಕ್ ನೀಡಿದು, ಇದರ ಬಿಸಿಯನ್ನು ತಾಲೂಕಿನ 238 ಮಂದಿ ಗ್ರಾಹಕರಿಗೂ ತಟ್ಟಿದೆ.
ಇವರೆಲ್ಲ ಎಂದಿನಂತೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗ ಗ್ರಾಹಕರಿಗೆ ಎಪಿಎಲ್ ಶಾಕ್‍ನ ಬಿಸಿ ತಗಲುತ್ತಿದೆ.
ಮತ್ತೊಂದಡೆ ಈ ಶ್ರಮ ಕಾರ್ಡ್ ಹೊಂದಿದ ತಾಲೂಕಿನ 1850 ಜನ ಕಾರ್ಮಿಕರ ಪೈಕಿ 190 ಕಾರ್ಮಿಕರು ಬಿಪಿಎಲ್ ಕಾರ್ಡ್‍ನಿಂದ ವಂಚಿತರಾಗಿದ್ದರು. ಇಂಥವರನ್ನು ಗುರುತಿಸಿ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಈ ಶ್ರಮಕಾರ್ಡ್ ಹೊಂದಿದ್ದ ಕಾರ್ಮಿಕರ ಗುರುತಿಸಿ ಅವರ ದಾಖಲೆಗಳನ್ನು ಪಡೆದು ಒಟ್ಟು 190 ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‍ಗಳನ್ನು ಏಕಕಾಲಕ್ಕೆ ವಿತರಿಸಿದ್ದಾರೆ.
ಬಿಪಿಎಲ್ ಕಾರ್ಡ್‍ನಿಂದ ಎಪಿಎಲ್‍ಗೆ ವರ್ಗಾತರಲ್ಲಿ 48 ಮಂದಿ ಸರ್ಕಾರಿ ನೌಕರರು, 197 ಮಂದಿ ಆದಾಯ ತೆರಿಗೆ ಪಾವತಿದಾರರು ಸೇರಿ ಒಟ್ಟು 238 ಜನರ ಬಿಪಿಎಲ್ ಕಾರ್ಡ್‍ನಿಂದ ಎಪಿಎಲ್‍ಗೆ ಆಹಾರ ಇಲಾಖೆಯ ಅಧಿಕಾರಿಗಳು ವರ್ಗಾಯಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು ಬಿಪಿಎಲ್ ಮತ್ತು ಅಂತ್ಯೊದಯ ಸೇರಿ 68 ಸಾವಿರ ಕುಟುಂಬಗಳಿದ್ದು, ಅಲ್ಲದೆ, ಸುಮಾರು 10 ಸಾವಿರ ಎಪಿಎಲ್ ಗ್ರಾಹಕರೂ ಇದ್ದಾರೆ ಎಂದು ಆಹಾರ ಶಿರಸ್ತೆದಾರ ಅಮರೇಶ ಕಲಮತಣಿ ಹಾಗೂ ಆಹಾರ ನಿರೀಕ್ಷ ಮುಜಾಹೀದ್ ಸಿಂದಗಿ ಅವರು ತಿಳಿಸಿದ್ದಾರೆ.
Comments are closed.