ಅಳಂದ: ಇಲ್ಲಿನ ತಾಲೂಕು ಆರೋಗ್ಯಾಧಿಕಾರಿ ಸುಶೀಲಕುಮಾರ ಅಂಬರೆ ಅವರಿಗೆ ನ,16ರಂದು ಆರೋಗ್ಯ ಇಲಾಖೆಯ ಆಯುಕ್ತರು ವಿಚಾರಣೆ ಬಾಕಿ ಇರಿಸಿ ನೀಡಿದ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತ ಮಂಡಳಿ (ಕೆಎಟಿ), ನ್ಯಾಯಾಲಯವು ತಡೆ ನೀಡಿದೆ.
ಅಂಬುರೆ ಅವರ ಅಮಾನತ್ತಿನ ಆದೇಶದಲ್ಲಿ ಆಯುಕ್ತರು, ತಾಲೂಕು ಆರೋಗ್ಯಾಧಿಕಾರಿಗಳ ಪ್ರಭಾರ ಹುದ್ದೆಯನ್ನು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರನ್ನು ವಹಿಸಿಕೊಡಲು ಸೂಚಿಸಲಾಗಿತ್ತು.
ಆದರೆ, ಅಂಬುರೆ ಅವರು ತಮ್ಮ ಮೇಲೆ ಕರ್ತವ್ಯಲೋಪ ಮತ್ತು ದರ್ನಡತೆ ಆಧಾರದ ಮೇಲೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರ ಅಮಾನತುಗೊಳಿಸಿ ನೀಡಿದ ಆದೇಶಕ್ಕೆ ಪ್ರಶ್ನಿಸಿ ಕೆಎಟಿ ನ್ಯಾಯಾಲಯ ಮೋರೆ ಹೋದ ಹಿನ್ನೆಲೆಯಲ್ಲಿ ಕೆಎಟಿ ಕೋರ್ಟ್ ನ.22ರಂದು ತಡೆಯಾಜ್ಞೆ ನೀಡಿದ್ದು, ಹೀಗಾಗಿ ಆಳಂದ ಆರೋಗ್ಯಾಧಿಕಾರಿಯಾಗಿ ಅಂಬುರೆ ಮುಂದುವೆರೆದು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
Comments are closed.