Shubhashaya News

BIG NEWS : ರಾಜ್ಯ ಸರ್ಕಾರಕ್ಕೆ ಯಡಿಯೂರಪ್ಪರನ್ನು ಕಂಡರೆ ಈಗಲೂ ಭಯವಿದೆ : ಬಿವೈ ವಿಜಯೇಂದ್ರ ಹೇಳಿಕೆ

ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರುವ ಕುರಿತಾಗಿ, ಯಡಿಯೂರಪ್ಪ ಅವರನ್ನು ಕಂಡರೆ ರಾಜ್ಯ ಸರ್ಕಾರಕ್ಕೆ ಈಗಲೂ ಭಯವಿದೆ. ಹೀಗಾಗಿ ದಿನ ಬೆಳಗಾದರೆ ಕೇಸ್ ಅಂತಿದ್ದಾರೆ. ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರ ನಾವು ಹೆದರುವ ಮಾತೆ ಇಲ್ಲ ಎಂದು ಕಲಬುರ್ಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಹೇಳಿಕೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಶೋಕ್ ದೆಹಲಿಗೆ ಭೇಟಿ ನೀಡುವ ವಿಚಾರವಾಗಿ, ಆರ್ ಅಶೋಕ್ ವಿರೋಧ ಪಕ್ಷದ ನಾಯಕ ವರಿಷ್ಠರ ಭೇಟಿಗೆ ಅಶೋಕ್ ದೆಹಲಿಗೆ ಹೋಗಿರಬಹುದು. ಆರ್ ಅಶೋಕ ದೆಹಲಿ ಭೇಟಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಸೆಂಬರ್ 7ರಂದು ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಅವತ್ತು ಎಲ್ಲವೂ ಸರಿ ಹೋಗುತ್ತೆ. ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಎಸ್ ಟಿ ಸೋಮಶೇಖರ್ ಬಗ್ಗೆ ಮಾತನಾಡಲು ಹೋಗಲ್ಲ ಎಂದರು.

ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ.ರೈತರನ್ನು ಬೀದಿಗೆ ತರುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಇಂದು ಬೀದರ್ ಕಲ್ಬುರ್ಗಿಯಲ್ಲಿ ಬೃಹತ್ ಹೋರಾಟ ಮಾಡುತ್ತಿದ್ದೇವೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಿನ್ನೆ ಯಡ್ರಾಮಿ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಜಾತಿ ಧರ್ಮವನ್ನು ಲೆಕ್ಕಿಸದೆ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲಿನ ಜನ ಉಸ್ತುವಾರಿ ಸಚಿವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Comments are closed.

Don`t copy text!