ಆಳಂದ: ತಡೋಳಾ ಶಾಲಾ ಮಕ್ಕಳ ಸಮಸ್ಯೆಯನ್ನು ಮುಖಂಡ ರಾಮಮೂರ್ತಿ ಗಾಯಕವಾಡ ಅವರು ಶಿಕ್ಷಕರಿಗೆ ಪ್ರಶ್ನಿಸಿ ಸರಿಪಡಿಸುವಂತೆ ಒತ್ತಾಯಿಸಿದರು.
ಆಳಂದ: ತಾಲೂಕಿನ ತಡೋಳಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕುರಿತು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಖ್ಯ ಗುರುಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲವೆಂದು ಆರೋಪಿಸಲಾಗಿದ್ದು, ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂದು ದೂರಿದರು.
ಮಧ್ಯಾಹ್ನ ಬಿಸಿಯೂಟದಲ್ಲಿ ಪೌಷ್ಠಿಕ ಆಹಾರ ವಿತರಿಸಬೇಕಿರುವ ಚಿಕ್ಕೆ ಮತ್ತು ಮೊಟ್ಟೆ, ಬಾಳೆ ಹಣ್ಣು ನೀಡುತ್ತಿಲ್ಲ ಹಿಂದಿನ ವರ್ಷದ ಸೈಕಲ್ ವಿತರಣೆಯ ದುವ್ರ್ಯವಸ್ಥೆ, ಮತ್ತು ಗ್ರಂಥಾಲಯ ಪುಸ್ತಕಗಳ ನಿರ್ಲಕ್ಷ್ಯ ವಹಿಸಿದ್ದು ಮಕ್ಕಳಿಗೆ ಓದಲು ಕೊಡುತ್ತಿಲ್ಲ ಎಂದು ಗ್ರಾಮದ ಮುಖಂಡ ರಾಮಮೂರ್ತಿ ಗಾಯಕವಾಡ ಅವರು ಶಾಲೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಶಿಕ್ಷರನ್ನು ಪ್ರಶ್ನಿಸಿದ ವಿಡಿಯೂ ಸಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ಶಿಕ್ಷಣಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಲುಪಿಸುವುದಾಗಿ ರಾಮ್ ಮೂರ್ತಿ ಗಾಯಕ್ಕೊಡವರು ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಸಾವಳೇಶ್ವರ ಅವರು ಕೂಡ ಮುಖ್ಯ ಗುರುಗಳಿಗೆ ಸೂಕ್ತ ಸಲಹೆ ನೀಡಿದರೂ ಪರಿಸ್ಥಿತಿ ಯಾವುದೇ ಸುಧಾರಣೆ ಕಂಡುಬಂದಿಲ್ಲವೆಂದು ಆರೋಪಿಸಿದ ರಾಮಮೂರ್ತಿ ಗಾಯಕವಾಡ ಅವರು, ಶಾಲೆಯಲ್ಲಿ ಶೈಕ್ಷಣಿಕ ಸಮಸ್ಯೆಗಳ ಕುರಿತು ಪ್ರಶ್ನಿಸುವ ಪ್ರಮುಖರನ್ನು ಮತ್ತೊಬ್ಬರ ಮೂಲಕ ದಬಾಯಿಸುವ ಕಾರ್ಯವನ್ನು ಮುಖ್ಯ ಶಿಕ್ಷಕರು ಮಾಡುತ್ತಿದ್ದಾರೆ. ಈಗಾಗಲೇ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾರಿ ಜೋಗೆ ಅವರಿಗೆ ಮತ್ತೊಬ್ಬರ ಮೂಲಕ ಮೊಬೈಲ್ ಮೂಲಕ ದಬಾಯಿಸಲು ಯತ್ನಿಸಿದ್ದಾರೆ. ಮುಖ್ಯ ಶಿಕ್ಷಕರು ಶಾಲೆಗೆ ಸಮಪರ್ಕವಾಗಿ ಬರುವುದಿಲ್ಲ. ಬಂದರು ಹಾಜರಿ ಹಾಕಿ ಹೋಗುತ್ತಾರೆ. ಕಲಿಸುವುದಂತು ದೂರದ ಮಾತಾಗಿದೆ ಎಂದು ಹೇಳಿದ ಅವರು, ಸಂಬಂಧಿತ ಅಧಿಕಾರಿಗಳು ಈ ಕೂಡಲೇ ಶಾಲೆಗೆ ಭೇಟಿ ನೀಡಿ ಸುವ್ಯವಸ್ಥೆಗೆ ಕ್ರಮಕೈಗೊಳ್ಳದೇ ಹೋದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಗಾಯಕವಾಡ ಎಚ್ಚರಿಸಿದ್ದಾರೆ.
Comments are closed.