ಆಳಂದ:ತಾಲೂಕಿನ ಖಜೂರಿ ಖಂಡಾಳ್ ಮಾರ್ಗದ ರಸ್ತೆ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ಮುಖಂಡರು ತಡೆ ಹಿಡಿದಿದ್ದಾರೆ
ಅಳಂದ: ತಾಲೂಕಿನ ಖಜೂರಿ ಗಡಿ ಭಾಗದಿಂದ ಖOಡಾಳವರೆಗೆ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ಮತ್ತು ಪಂಚಾಯತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದುರಸ್ತಿ ಕಾರ್ಯದಲ್ಲಿ ಅನೇಕ ದೋಷಗಳು ಕಂಡುಬರುತ್ತಿದ್ದು, ಕಾಮಗಾರಿ ಗುಣಮಟ್ಟವನ್ನು ಸಮರ್ಪಕವಾಗಿ ಕಾಪಾಡದೇ, ಕಳಪೆ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಮುಖಂಡರಾದ ಮಹಾವೀರ ಕಾಂಬಳೆ, ಅಶಪಾಕ್ ಮುಲ್ಲಾ, ಶರಣಪ್ಪ ಡಗೆ, ರಾಮಮೂರ್ತಿ ಗಾಯಕ್ವಾಡ್, ವಿಜಯ ಕಾಂಬಳೆ, ಅಪ್ಪರಾವ್ ಜಾಧವ್, ತ್ರಿಮುಕ್ ಶಿಂದೆ, ರಾಹುಲ್ ಪಾಟೀಲ್, ಅವಿನಾಶ್ ರೆನಕೆ, ಶ್ರೀನಿವಾಸ ಪಾಟೀಲ, ಮತ್ತು ಕಮಲೇಶ್ ಅವಟೆ ಇವರುಗಳು, ಈ ಬಗ್ಗೆ ತಡೋಳಾ ಮತ್ತು ಖಜೂರಿ ಪಂಚಾಯತಿ ಸದಸ್ಯರಿಗೆ ಮತ್ತು ಗುತ್ತೆದಾರರಿಗೆ ಮನವಿ ಮಾಡಿದರು. ಗುತ್ತೆದಾರರಿಂದ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ದೂರಿದ್ದಾರೆ.
“ಈ ಕಳಪೆ ಕಾಮಗಾರಿಯ ಪರಿಣಾಮವಾಗಿ ಜನಸಾಮಾನ್ಯರಿಗೆ ಭಾರಿ ತೊಂದರೆ ಆಗುತ್ತಿದೆ. ಸರಕಾರದಿಂದ ಆಯ್ಕೆಯಾದ ಹಣವನ್ನು ದುರುಪಯೋಗ ಮಾಡಿ, ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದು ಜನರ ಜೀವನದೊಂದಿಗೆ ಆಟವಾಡುವಂತಾಗಿದೆ,” ಎಂದು ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅವರ ಹೇಳಿಕೆ ಪ್ರಕಾರ, ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. “ನಾವು ಈ ಕಾರ್ಯವನ್ನು ಪೂರ್ತಿಯಾಗಿ ನಿಲ್ಲಿಸಿ, ಗುಣಮಟ್ಟದೊಂದಿಗೆ ಪ್ರಾಮಾಣಿಕ ಕೆಲಸ ನಡೆಯುವಂತೆ ಮಾಡುವ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದು ಸ್ಥಳೀಯ ಮುಖಂಡರು ಹೇಳಿದ್ದಾರೆ.
Comments are closed.