Shubhashaya News

ಪಂಚಸೇನಾ ರಾಜ್ಯ ಸಂಘಟನೆಗೆ ಆನಂದ ಪಾಟೀಲ್ ನೇಮಕ

ಆಳಂದ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ಹಾಗೂ ರಾಷ್ಟ್ರೀಯ ಅಧ್ಯಕ್ಷ ಡಾ. ಬಿ.ಎಸ್. ಪಾಟೀಲ್ (ನಾಗರಾಳ ಹುಲಿ) ಅವರ ಸಲಹೆ ಮೇರೆಗೆ, ತಾಲೂಕಿನ ಕೊರಳ್ಳಿ ಗ್ರಾಮದ ಆನಂದ ಕೆ. ಪಾಟೀಲ್ ಅವರನ್ನು ಪಂಚಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಆನಂದ ಕೆ. ಪಾಟೀಲ್ ಅವರು ಚತುರ ಯುವ ನಾಯಕರಾಗಿದ್ದು, ಸಂಘಟನಾ ದಕ್ಷತೆಯಲ್ಲಿ ವಿಶಿಷ್ಟ ಹೆಸರು ಗಳಿಸಿದ್ದಾರೆ. ಕರ್ನಾಟಕದ ಪಂಚಮಸಾಲಿ ಸಮಾಜದ ಜಿಲ್ಲೆ, ತಾಲೂಕು, ಮತ್ತು ಗ್ರಾಮ ಮಟ್ಟದ ಘಟಕಗಳ ಯುವಕರಿಗೆ ಸಂಘಟನಾ ಚಟುವಟಿಕೆಯಲ್ಲಿ ಹೆಚ್ಚಿನ ಪ್ರೇರಣೆಯನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಈ ನೇಮಕಾತಿಯನ್ನು ರಾಜ್ಯಾಧ್ಯಕ್ಷ ಶ್ರೀ ರುದ್ರಗೌಡ ವಿ. ಸೋಲಬಗೌಡರ್ ಅವರು ಅಧಿಕೃತವಾಗಿ ಘೋಷಿಸಿದ್ದು, ನೂತನ ನೇಮಕಾತಿಯ ಮೂಲಕ ಸಂಘಟನೆಯ ಬಲ ಹೆಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.

Don`t copy text!