Shubhashaya News

ಬಾಲ್ಯದಲ್ಲಿ ಜಂತು ಸಮಸ್ಯೆ ನಿವಾರಿಸಿದರೆ ದೈಹಿಕ ಮಾನಸಿಕ ಬೆಳವಣಿಗೆ: ಅಂಬುರೆ

ಆಳಂದ: ಪಟ್ಟಣದಲ್ಲಿ ನಗರ ಪಿಎಚ್‍ಸಿ ಆಶ್ರಯದಲ್ಲಿ ಬಿವಿಎಚ್‍ಪಿ ಮರಾಠಿ ಶಾಲೆಯಲ್ಲಿ ಆಯೋಜಿಸಿದ್ದ ಜಂತು ಹುಳು ನಿವಾರಣೆ ಕಾರ್ಯಕ್ರಮದಲ್ಲಿ ಡಿಎಚ್‍ಒ ಡಾ. ಸುಶೀಲಕುಮಾರ ಅಂಬುರೆ ಮಾತನಾಡಿದರು. ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಇತರರು ಇದ್ದರು.

ಆಳಂದ: “ಬಾಲ್ಯದಲ್ಲಿ ಜಂತು ಹುಳಿನ ಸಮಸ್ಯೆ ಇರುವ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗಲಿದ್ದು, ಇದನ್ನು ಆರಂಭಿಕ ಹಂತದಲ್ಲಿ ನಿವಾರಿಸಲು ಮುಂದಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ ಅಂಬುರೆ ಅವರು ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ (Pಊಅ) ಮತ್ತು ಬಿವಿಎಚ್‍ಪಿ ಮರಾಠಿ ಶಾಲೆಯ ಆಶ್ರಯದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ ಮಾತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ್ ಅವರು ಮಾತನಾಡಿ, ಜಂತುಹುಳ ಸಮಸ್ಯೆ ಬಾಲ್ಯದಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗುತ್ತದೆ. ಜಂತುಹುಳದ ಪರಿಣಾಮವಾಗಿ ಪೆÇೀಷಕಾಂಶಗಳ ಕೊರತೆ ಉಂಟಾಗುತ್ತಿದ್ದು, ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಸಂಭವವಿದೆ. ಈ ಸಂದರ್ಭದಲ್ಲೇ, ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮವು ಒಂದು ಮುಖ್ಯ ತಂತ್ರವಾಗಿದೆ. ಈ ಕಾರ್ಯಕ್ರಮದ ಮೂಲಕ ನಾವು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ವಿತರಿಸುತ್ತೇವೆ, ಇದು ಅವರ ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಮಕ್ಕಳ ಪಾಲಕರಿಗೆ, ಶಿಕ್ಷಕರಿಗೆ, ಮತ್ತು ಸಮುದಾಯದ ಜನರಿಗೆ ಜಂತುಹುಳದ ಬಗ್ಗೆ ಅರಿವು ಮೂಡಿಸುವುದು ಇನ್ನೊಂದು ಪ್ರಮುಖ ಗುರಿಯಾಗಿದೆ. ಎಲಾ ಮಕ್ಕಳೂ ಈ ಔಷಧಿಯನ್ನು ತೆಗೆದುಕೊಳ್ಳಬೇಕು, ಏಕೆಂದರೆ ಇದು ಸುಲಭ, ಸುರಕ್ಷಿತ, ಮತ್ತು ಪರಿಣಾಮಕಾರಿ ಕ್ರಮವಾಗಿದೆ ಇದರ ಲಾಭವನ್ನು ಪಡೆಯಬೇಕು ಎಂದರು.
ವೇದಿಕೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ನಂದಿಕೋಲ ಹಿರಿಯ ಎಸ್‍ಎಚ್‍ಒ ಅಬ್ದುಲ್ ರಔಫ್, ಸಂಜು ಲೋಹರ್, ದೇವಾನಂದ, ಕರಬಸಪ್ಪ, ಕೈಲಾಶ, ಉಮಾ, ಮತ್ತು ಶ್ರೀಶೈಲ ಮರಾಠಿ ಶಾಲೆಯ ಶಿಕ್ಷಕ ಪ್ರಕಾಶ್, ಮತ್ತು ಇತರ ಶಾಲೆಯ ಶಿಕ್ಷಕಿಯರು ಹಾಗೂ ಶಿಕ್ಷಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.

Don`t copy text!