Shubhashaya News

ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ; ಅರುಟಗಿ.

ಆಳಂದ: ಪಟ್ಟಣದ ನ್ಯಾಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಉದ್ಘಾಟಿಸಿ ಮಾತನಾಡಿದರು. ಕಿ. ಶ್ರೇ. ನ್ಯಾಯಾಧೀಶ ಯಲ್ಲಾಪ್ಪ ಕಲ್ಲಾಪೂರ ಇತರರು ಇದ್ದರು.

ಆಳಂದ: ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷುಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶರು ಮತ್ತು ಕಾನೂನು ಸೇವಾ ಸಮಿತಿ ತಾಲೂಕು ಅಧ್ಯಕ್ಷ ಎಸ್. ಎಂ. ಅರುಟಗಿ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾನತೆ, ಸೌಹಾರ್ದತೆ ಮತ್ತು ನ್ಯಾಯದ ಗುರಿಯನ್ನು ಸಾಧಿಸಲು ಮಾನವ ಹಕ್ಕುಗಳ ಸಂರಕ್ಷಣೆ ಅನಿವಾರ್ಯವಾಗಿದೆ. ಕಾನೂನಿನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರು ಸಮಾನರಾಗಿ ಕಾಣಿಸಬೇಕಾಗಿದೆ. ಅಸಮಾನತೆ ಮತ್ತು ಶೋಷಣೆಯನ್ನು ತಡೆಯುವ ಮೂಲಕವೇ ನಾವು ಸಮಾಜದಲ್ಲಿ ಸಮತೋಲನವನ್ನು ತಂದುಕೊಳ್ಳಬಹುದು. ಕಾನೂನು ಸೇವೆಗಳು ಸಾಮಾನ್ಯ ಜನರಿಗೂ ಪ್ರವೇಶದಾಯಕವಾಗಬೇಕು, ಇದರಿಂದ ಸಾಮಾಜಿಕ ನ್ಯಾಯ ಬಲಿಷ್ಠಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ, ನ್ಯಾಯವಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾನವ ಹಕ್ಕುಗಳ ಮಹತ್ವವನ್ನು ಅರಿಕೊಂಡು ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸುಮನ ಚಿತ್ತರಗಿ, ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ್ ರಾಠೋಡ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ. ಸಿಂದೆ, ಮಹಾದೇವ ಹತ್ತಿ, ಬಿ. ಜಿ. ಬೀಳಗಿ, ದೇವಾನಂದ ಹೋದಲೂರ, ಸಂಗಣ್ಣ ಕೆರಮಗಿ, ತೈಯಬಅಲಿ ಸೇರಿದಂಂತೆ ಈ ಕಾರ್ಯಕ್ರಮದಲ್ಲಿ ಪ್ರಮುಖ ನ್ಯಾಯವಾದಿಗಳು, ನ್ಯಾಯಾಂಗ ಸಿಬ್ಬಂದಿಗಳು, ಮತ್ತು ಸಾರ್ವಜನಿಕರು ಭಾಗವಹಿಸಿದರು.

Comments are closed.

Don`t copy text!