ಮುಖ್ಯಮಂತ್ರಿಗಳಿಂದ ಹೋರಾಟ ಹತ್ತಕ್ಕುವ ಹುನ್ನಾರ: ಶಿವಪ್ರಕಾಶ ಹೀರಾ ಕಿಡಿ
ಪಂಚಮಸಾಲಿ ಹೋರಾಟಕ್ಕೆ ಲಾಟಿಚಾರ್ಜ್: ವ್ಯಾಪಕ ಆಕ್ರೋಶ
ಆಳಂದ: ಬೆಳಗಾವಿಯ ಸುವರ್ಣಸೌಧ ಎದುರು 2ಎ ಮೀಸಲಾತಿಗಾಗಿ ರಾಜ್ಯ ಪಂಚಮಸಾಲಿ ಸಮಾಜದ ಹೋರಾಟಕ್ಕೆ ಪೆÇಲೀಸ್ ಲಾಟಿಚಾರ್ಜ್ ಮಾಡಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಂಚಮಸಾಲಿ ಮುಖಂಡರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚಮಸಾಲಿ ಸಮಾಜ ಸಂಘಟಿತವಾದರೆ ತಮ್ಮ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬ ಭಾವನೆಯಿಂದ, ಹೋರಾಟವನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡಿದ್ದಾರೆ, ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಗುರುವಾರ ಹೇಳಿಕೆ ನೀಡಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಿವಪ್ರಕಾಶ ಹೀರಾ ಅವರು ಪಂಚಮಸಾಲಿ ಹೋರಾಟಕ್ಕೆ ಸರ್ಕಾರ ಕೈಗೊಂಡಿರುವ ಲಾಟಿಚಾರ್ಜ್‍ಗೆ ತೀವ್ರವಾಗಿ ಖಂಡಿಸಿ ಮಾತನಾಡಿದ್ದಾರೆ.
ನಮ್ಮ ನ್ಯಾಯಯುತ ಹಕ್ಕಿಗಾಗಿ ಶಾಂತಿಯುತ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮೇಲೆ ಲಾಟಿಚಾರ್ಜ್ ನಡೆಸುವ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಸಮಾಜದ ಏಕತೆಯನ್ನು ಹತ್ತಿಕ್ಕಲು ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಪಂಚಮಸಾಲಿ ಸಮುದಾಯ ಸಂಘಟಿತವಾದರೆ ಅದರ ಪ್ರಭಾವದಿಂದ ಸರ್ಕಾರಕ್ಕೆ ತೊಂದರೆಯಾಗಬಹುದು ಎಂಬ ಭಾವನೆಯಿಂದಲೇ ಹೋರಾಟದ ಹಕ್ಕನ್ನು ಹೀನಾಯ ರೀತಿಯಲ್ಲಿ ಕಸಿಯಲಾಗಿದೆ,” ಎಂದು ಆರೋಪಿಸಿದರು.
ಸಮಾಜದ 2ಎ ಮೀಸಲಾತಿಯ ಬೇಡಿಕೆಯು ಸಮಾನತೆಯ ದೃಷ್ಠಿಯಿಂದ ಅಗತ್ಯವಾಗಿದ್ದು, ಸಂಘಟಿತ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಕ್ರಮವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾಟಿಚಾರ್ಜ್ ಘಟನೆ ಪಂಚಮಸಾಲಿ ಹೋರಾಟಗಾರರನ್ನು ಮಾತ್ರವಲ್ಲದೆ, ಇತರ ಪ್ರಗತಿಪರ ಸಂಘಟನೆಗಳಿಗೂ ಆತಂಕ ಉಂಟುಮಾಡಿದ್ದು, ಸಮುದಾಯದ ಮುಖಂಡರು ತಮ್ಮ ಹೋರಾಟವನ್ನು ತೀವ್ರಗೊಳಿಸಲು ಮತ್ತು ನ್ಯಾಯವನ್ನು ಸಾಧಿಸಲು ಸಂಕಲ್ಪಗೊಳಿದ್ದಾರೆ. ಸಮುದಾಯದ ಶಾಂತಿಯುತ ಹೋರಾಟದ ಹಕ್ಕನ್ನು ಕಸಿಯುವ ಈ ರೀತಿಯ ಕ್ರಮಗಳು ಸಾಮಾಜಿಕ ನ್ಯಾಯವನ್ನು ಸರ್ಕಾರವೇ ಕಸಿದುಕೊಳ್ಳುವಂತಿವೆ ಎಂದು ಅವರು ಖಂಡಿಸಿದ್ದಾರೆ.
ಸಮಾಜದ ಬೇಡಿಕೆಗಳಿಗೆ ಸರ್ಕಾರವು ಕಾನೂನಾತ್ಮಕವಾಗಿ ಸ್ಪಂದಿಸಬೇಕು. ಹೋರಾಟವನ್ನು ಹತ್ತಿಕ್ಕುವ ಈ ರೀತಿಯ ಪ್ರಯತ್ನಗಳು ಸರ್ಕಾರದ ನೈತಿಕತೆ ಮತ್ತು ಪಂಚಮಸಾಲಿ ಸಮುದಾಯದ ಬಲಕ್ಕೆ ದ್ರೋಹ ಮಾಡುತ್ತಿವೆ, 2ಎ ಮೀಸಲಾತಿ ಪ್ರಸ್ತಾಪ ಪ್ರಗತಿಪರ ದೇಶ ಕಟ್ಟುವ ದೃಷ್ಟಿಕೋನದಲ್ಲಿ ಮಹತ್ವದ್ದಾಗಿದೆ. ಹೋರಾಟವನ್ನು ಹತ್ತಿಕ್ಕಲು ಪಿಡುಗು ಕ್ರಮಗಳನ್ನು ಬಿಟ್ಟು, ಸಮಾಜದ ಬೇಡಿಕೆಗಳಿಗೆ ನ್ಯಾಯ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಸೇರಿದಂತೆ, ಶ್ರೇಣಿತ ಸಮುದಾಯಗಳ ಶೋಷಣೆಯ ವಿರುದ್ಧ ಆಳವಾದ ಚಿಂತನೆ ನಡೆಸಬೇಕಾಗಿದೆ, ಎಂದು ಅವರು ಆಗ್ರಹಿಸಿದರು.
ಬೇಡಿಕೆಗೆ ಸ್ಪಂದಿಸಬೇಕಿದ್ದ ಮುಖ್ಯಂತ್ರಿಗಳ ಮತ್ತುವರ ಸರ್ಕಾರದ ಲಾಟಿಚಾರ್ಜ್‍ಗೆ ಬಗ್ಗೆದ ಹೋರಾಟವನ್ನು ಮುಂದುವರಿಯಲಿದೆ. 2ಎ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ತಮ್ಮಾದಗಿದೆ ಕೂಡಲೇ ಸರ್ಕಾರ ಲಾಟಿಚಾರ್ಜ್ ಕ್ರಮಕ್ಕೆ ಕ್ಷೆಮೆಕೇಳಿ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
Comments are closed.