Shubhashaya News

ವಿಕಲಚೇತನರ ರಿಯಾಯಿತಿ ಬಸ್‍ಪಾಸ್ ಮಾನ್ಯತಾ ಅವಧಿ ವಿಸ್ತರಣೆ

ವಿಕಲಚೇತನರು ಸಲ್ಲಿಸಿರುವ ಮನವಿ ಮೇರೆಗೆ 2020ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ಪಾಸ್ಗಳ ಮಾನ್ಯತಾ ಅವಧಿಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮರಾವ್ ಎಂ. ಅವರು ತಿಳಿಸಿದ್ದಾರೆ.
ವಿಕಲಚೇತನರು ಅರ್ಜಿ ಸಲ್ಲಿಸಲು ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಹಾಗೂ ವಿಕಲಚೇತನರು ಕಳೆದ ಸಾಲಿನ ಪಾಸಿನ ಅವಧಿಯನ್ನು ವಿಸ್ತರಿಸುವಂತೆ ಅವರು ಸಂಸ್ಥೆಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮೇಲ್ಕಂಡಂತೆ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ. ಅದೇ ರೀತಿ 2021ನೇ ಸಾಲಿನ ಬಸ್ ಪಾಸ್ಗಳನ್ನು ಸೇವಾ ಸಿಂಧುವಿನ ಮೂಲಕ ಅರ್ಜಿ ಪಡೆದು ಬಸ್ ಪಾಸ್ ವಿತರಿಸುವ ಕ್ರಮ ಕೈಗೊಳ್ಳಲಾಗಿದ್ದು, ವಿಕಲಚೇತನರು ಕೂಡಲೇ ಬಸ್ಪಾಸ್ನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Comments are closed.

Don`t copy text!