Shubhashaya News

ಒನ್ ನೇಶನ್, ಒನ್ ಎಲೆಕ್ಷನ್ ಸಾಧುವೇ?

ದೇಶದ ಚುನಾವಣೆಯಲ್ಲಿ ಅಮೂಲಾಗ್ರ ವ್ಯವಸ್ಥೆ ಬದಲಾವಣೆಯನ್ನು ತರಲು ನಿರ್ಧರಿಸಿರುವ ಚುನಾವಣಾ ಆಯೋಗವು ಈಗ ಮತ್ತೊಂದು ಪ್ರಸ್ತಾವವನ್ನು ದೇಶದ ಜನರ ಮುಂದೆ ಇಟ್ಟಿದೆ. ಅದರ ಮೊದಲ ಹಂತವಾಗಿ ಈಗ ರಾಜ್ಯದ ವಿವಿಧ ಶಾಸನಸಭೆಗಳಲ್ಲಿ ಅದರ ಮಹತ್ವ, ಅಗತ್ಯತೆ ಕುರಿತು ಚರ್ಚೆಗಳು ಗರಿಗೆದರಿವೆ. ಅಷ್ಟಕ್ಕೂ ಒನ್ ನೇಶನ್ ಒನ್ ಎಲೆಕ್ಷನ್ ಭಾರತದಂತಹ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾಧುವೇ ಎನ್ನುವುದು ಕೋಟ್ಯಾಂತರ ಜನರ ಪ್ರಶ್ನೆಯಾಗಿದೆ.
ದೇಶಾದ್ಯಂತ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದರೆ ಮಾನವ ಸಂಪನ್ಮೂಲದ ಜೊತೆ ಆರ್ಥಿಕ ಸಂಪನ್ಮೂಲವೂ ಉಳಿತಾಯವಾಗಲಿದೆ ಎನ್ನುತ್ತಾರೆ ಚುನಾವಣಾ ಆಯೋಗದ ಅಧಿಕಾರಿಗಳು. ಆದರೆ ವಿರೋಧ ಪಕ್ಷಗಳು ಮಾತ್ರ ಈ ಪ್ರಸ್ತಾಪವನ್ನು ಸುತಾರಾಂ ಒಪ್ಪಲು ತಯಾರಿಲ್ಲ ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಹಾಗೂ ರಾಜ್ಯದ ಸಾರ್ವಭೌಮ ಅಧಿಕಾರವನ್ನು ಕೇಂದ್ರವು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಹೀಗಾಗಿ ಈ ವ್ಯವಸ್ಥೆಗೆ ವಿರೋಧ ಪಕ್ಷಗಳು ನೇರವಾಗಿಯೇ ವಿರೋಧವನ್ನು ವ್ಯಕ್ತಪಡಿಸಿವೆ.
ಕೇಂದ್ರದಲ್ಲಿ ಅಧಿಕಾರ ಚಲಾಯಿಸುತ್ತಿರುವ ಎನ್‍ಡಿಎ ಮಾತ್ರ ಈ ವ್ಯವಸ್ಥೆಯನ್ನು ಶತಾಯುಗತಾಯ ಹೇಗಾದರೂ ಮಾಡಿ ಚಲಾವಣೆಗೆ ತರಬೇಕು ಎಂಬ ಆಶಯವನ್ನು ಹೊಂದಿದೆ. ಇದರಿಂದ ಜನಗಳಿಗೆ ಪದೇ ಪದೇ ಎದುರಾಗುವ ಚುನಾವಣೆಗಳಿಂದ ಮುಕ್ತಿ ಕೊಡಿಸಬಹುದು ಅಲ್ಲದೇ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಎದುರಾಗುವ ನೀತಿ ಸಂಹಿತೆಯಂಥ ವಿಷಯಗಳಿಂದ ದೂರ ಸರಿದು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಸಮಯ ನೀಡಬಹುದು ಹೀಗಾಗಿ ಒಂದು ದೇಶ ಒಂದು ಚುನಾವಣೆ ಅಗತ್ಯ ಎಂದು ಪ್ರತಿಪಾದಿಸುತ್ತಿದೆ. ಒಟ್ಟಿನಲ್ಲಿ ಹೊಸ ವ್ಯವಸ್ಥೆ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಲಿ ಅದರ ಜೊತೆಗೆ ಚುನಾವಣಾ ವೆಚ್ಚಗಳನ್ನು ಕಡಿಮೆಗೊಳಿಸಲಿ.

Comments are closed.

Don`t copy text!