Shubhashaya News

ಸುಸ್ಥಿರ ಅಭಿವೃದ್ಧಿ ಪರ ಬಜೆಟ್- ಶಾಸಕ ಗುತ್ತೇದಾರ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮಂಡಿಸಿದ ಬಜೆಟ್ ಹಲವಾರು ಸುಧಾರಣಾ ಕ್ರಮಗಳನ್ನು ಒಳಗೊಂಡಿದೆ ಅಲ್ಲದೇ ಮಹಿಳಾ ಸ್ವಾವಲಂಬನೆಯ ನೀತಿಗಳನ್ನು ಈ ಬಜೆಟ್ ಹೊಂದಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಣ್ಣಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಆರ್ಥಿಕ ವರ್ಷದ ಬಜೆಟ್ ಆಶಾದಾಯಕವಾಗಿದೆ, ಬಜೆಟ್ ಗಾತ್ರ ಕುಗ್ಗಿಸದೇ ಮುಖ್ಯಮಂತ್ರಿಗಳು ಯಥಾಸ್ಥಿತಿ ಕಾಪಾಡಿಕೊಂಡು ನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಜೆಟ್‍ನಲ್ಲಿ ಎಲ್ಲ ವರ್ಗದ, ಎಲ್ಲ ಸಮುದಾಯದ ಜನರಿಗೆ ಆದ್ಯತೆ ನೀಡಲಾಗಿದೆ ಹೀಗಾಗಿ ಇದೊಂದು ಉತ್ತಮ ಬಜೆಟ್ ಎಂದು ಕೊಂಡಾಡಿದ್ದಾರೆ.

Comments are closed.

Don`t copy text!