ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲೆಯ ವಿವಿಧ ಸಗಟು ಗೋದಾಮುಗಳಲ್ಲಿ ದಾಸ್ತಾನುಕರಿಸಲಾದ ಹಾಗೂ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಪಡಿತರ ಪದಾರ್ಥಗಳಾದ ಅಡುಗೆ ಎಣ್ಣೆ, ತೊಗರಿ ಬೆಳೆ, ಸಕ್ಕರೆ ಹಾಗೂ ಖಾಲಿ ಗೋಣಿ ಚೀಲಗಳನ್ನು ವಿಲೇವಾರಿಗಾಗಿ ಸಾರ್ವಜನಿಕರು ಹಾಗೂ ವರ್ತಕರಿಂದ ಅಲ್ಪಾವಧಿ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ಸಾರ್ವಜನಿಕರು ಹಾಗೂ ವರ್ತಕರು ಟೆಂಡರ್ ನಮೂನೆ, ಷರತ್ತು ಹಾಗೂ ನಿಬಂಧನೆಗಳ ವಿವರಗಳನ್ನು www.eproc.karnataka.gov.in ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಂಡು ಟೆಂಡರ್ ಅರ್ಜಿಯನ್ನು ಮಾರ್ಚ್ 12 ರೊಳಗಾಗಿ ಅಪಲೋಡ್ ಮಾಡಬೇಕು. ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನವಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ, ಚಿತ್ತಾಪುರ, ಕಲಬುರಗಿ ಗ್ರಾಮಾಂತರ, ಕಲಬುರಗಿ ಪಡಿತರ ಹಾಗೂ ಶಹಾಬಾದಗಳಲ್ಲಿರುವ ಸಗಟು ಗೋದಾಮುಗಳಲ್ಲಿ ಪಡಿತರ ಪದಾರ್ಥಗಳು ಲಭ್ಯವಿದ್ದು, ಟೆಂಡರ್ನಲ್ಲಿ ಭಾಗವಹಿಸುವ ಟೆಂಡರದಾರರು ತಮ್ಮ ಸ್ವಂತ ಖರ್ಚಿನಲ್ಲಿ ಸಗಟು ಗೋದಾಮುಗಳಿಗೆ ಭೇಟಿ ನೀಡಿ ಖರೀದಿಸಲಿಚ್ಛಿಸುವ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಹಾಗೂ www.eproc.karnataka.gov.inವೆಬ್ಸೈಟ್ನ್ನು ಸಂಪರ್ಕಿಸಲು ಕೋರಲಾಗಿದೆ.
Comments are closed.