ಔರಾದ್ ತಾಲೂಕಿನ ಠಾಣಾ ಕುಶನೂರು ಗ್ರಾಮದ ಬಸವ ಮಂಟಪದಲ್ಲಿ ಸೋಮವಾರ ರಿಲಾಯನ್ಸ್ ಫೌಂಡೇಷನ್ ಬೀದರ್, ತಾಲೂಕು ಕಾನೂನು ಸೇವೆಗಳ ಸಮಿತಿ ಔರಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಧೀಶರಾದ ಮಲ್ಲಿಕಾರ್ಜುನ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಪೂಜ್ಯ ಸಿದ್ದಲಿಂಗ ಸ್ವಾಮಿಜಿ, ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ , ಸಿಡಿಪಿಒ ಶಂಭುಲಿಂಗ ಹಿರೇಮಠ, ಶ್ರೀದೇವಿ ಹೂಗಾರ್, ಶಿವಾನಂದ ಔರಾದೆ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಮಹಾನಂದಾ ಪನ್ನಾಳೆ, ಸಂದೀಪ್ ಮೇತ್ರೆ, ಸುಧೀರ್ ಮಡಿವಾಳ್, ಪದ್ಮಾವತಿ ಸ್ವಾಮಿ, ಪಿಡಿಒ ಮನೋಹರ್, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ, ಪ್ರೀತಿ ನಾಸೆ, ನಾಗಮ್ಮ, ಯೋಗೇಶ್ವರಿ, ರಾಜೇಶ್ರೀ, ರಮೇಶ ಬೋಚಾರೆ ಸೇರಿದಂತೆ ಇನ್ನಿತರರು ಇದ್ದರು.
ಕ್ಯಾಲೇಂಡರ್‍ಗಳಿಗೆ ಸೀಮಿತವಾಗದೇ ಮಹಿಳಾ ದಿನಾಚರಣೆಯನ್ನು ಎಲ್ಲರು ಆಚರಿಸುವಂತಾಗಲಿ ದುಡಿಯುವ ಮಹಿಳೆಯರನ್ನು ಗೌರವಿಸಿ ಪ್ರೋತ್ಸಾಹ ನೀಡಬೇಕು ಎಂದು ಸಿವಿಲ್ ನ್ಯಾಯಧೀಶ ಹಾಗು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಅವರು ನುಡಿದರು.
ಸೋಮವಾರ ತಾಲೂಕಿನ ಠಾಣಾಕುಶನೂರು ಗ್ರಾಮದ ಬಸವ ಮಂಟಪದಲ್ಲಿ ರಿಲಾಯನ್ಸ್ ಫೌಂಡೇಷನ್ ಬೀದರ್ ಹಾಗು ತಾಲೂಕು ಕಾನೂನು ಸೇವೆಗಳ ಸಮೀತಿ ಔರಾದ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರೂಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಧೀಶರಾದ ಮಲ್ಲಿಕಾರ್ಜುನ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಹೆಣ್ಣು ಸಮಾಜದ ಕಣ್ಣು ಎನ್ನುವಂತೆ ಸಹನೆಯ ಸಾಕಾರ ಮೂರ್ತಿಯಾಗಿರುವ ಮಹಿಳೆಯರಿಗೂ ಸಮಾಜದಲ್ಲಿ ತಾರತಮ್ಯವಿಲ್ಲದೇ ಎಲ್ಲರು ಉನ್ನತ ಸ್ಥರದಲ್ಲಿ ಗೌರವ ನೀಡಬೇಕು. ಇಂದಿನ ದಿನಗಳಲ್ಲಿ ಮಹಿಳೆಯರು ಒಳಮನೆ ಮಾತ್ರವಲ್ಲದೇ ಹೊರ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಕ್ರೀಯರಾಗಿ ತೊಡಗಿಸಿಕೊಂಡು ಸಮಾಜದಲ್ಲಿ ಅತ್ಯಂತ ದೊಡ್ಡ ಹೆಮ್ಮರವಾಗಿ ಬೆಳೆದಿದ್ದಾರೆ. ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ, ಜಾಗತಿಕ ಮಟ್ಟದಲ್ಲಿ ತಿಳಿವಳಿಕೆ, ಶಿಕ್ಷಣ, ತರಬೇತಿ, ವಿಜ್ಞಾನ, ತಂತ್ರಜ್ಞಾನಕ್ಕೆ ನೆರವು ನೀಡಿ, ಸಮಾಜದಲ್ಲಿ ಸಮಾನತೆಯ ವೈಶಿಷ್ಠ ಪೂರ್ಣಬದಲಾವಣೆಗಳಿಗೆ ಅವಕಾಶ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೇದಿತಾ ಹೂಗಾರ್ ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಹೂಗಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹೆಣ್ಣೆಂದರೇ ಅವಳು ಭೂಮಿ ತೂಕದವಳು, ಕರುಣಾಮಯಿ, ಸಹನಾಮಯಿ ತಾಯಿಯಾದವಳು. ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಚಾರ, ಮರ್ಯಾದೆ ಹತ್ಯೆ, ಶಿಕ್ಷಣ ನಿರಾಕರಣೆಗಳಂತಹ ಅನಾಚಾರಗಳು ದಿನನಿತ್ಯ ಸಮಾಜದಲ್ಲಿ ನಡೆಯುತ್ತಿರುವುದು ತಪ್ಪಿಸಬೇಕು. ಹೆಣ್ಣು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗದೇ ಅವಳು ಎಲ್ಲ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.
ರಿಲಾಯನ್ಸ್ ಫೌಂಡೇಷನ್ ಯೋಜನಾಧಿಕಾರಿ ಮತ್ತು ತಾಪಂ ಎಡಿ ಶಿವಾನಂದ್ ಔರಾದೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗು ಸ್ವಸಹಾಯ ಸಂಘದ ಮಹಿಳೆಯರಿಗೆ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ರೀತಿಯ ಆಟೋಟಗಳನ್ನು ಆಯೋಜಿಸಿ, ವಿಜೇತ ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಎರಡು ತಿಂಗಳುಗಳ ಕಾಲ ರಿಲಾಯನ್ಸ್ ಯೋಜನೆಯಿಂದ ಉಚಿತ ಟೇಲರಿಂಗ್ ತರಬೇತಿ ಪೂರ್ಣಗೊಳಿಸಿದ ಠಾಣಾಕುಶನೂರು, ಬೆಳಕುಣಿ(ಚೌ) ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಪೂಜ್ಯ ಸಿದ್ದಲಿಂಗ ಸ್ವಾಮಿಜಿ, ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ , ಸಿಡಿಪಿ ಶಂಭುಲಿಂಗ ಹಿರೇಮಠ, ಶ್ರೀದೇವಿ ಹೂಗಾರ್, ಶಿವಾನಂದ ಔರಾದೆ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಮಹಾನಂದಾ ಪನ್ನಾಳೆ, ಸಂದೀಪ್ ಮೇತ್ರೆ, ಸುಧಿರ್ ಮಡಿವಾಳ್,ಪದ್ಮಾವತಿ ಸ್ವಾಮಿ, ಪಿಡಿಒ ಮನೋಹರ್, ರಾಮಚಂದ್ರ ಶೇರಿಕಾರ್, ಸಂಗಪ್ಪ ಅತಿವಾಳೆ, ಸತೀಷ ಜೀರ್ಗೆ, ಪ್ರೀತಿ ನಾಸೆ, ನಾಗಮ್ಮ, ಯೋಗೇಶ್ವರಿ, ರಾಜೇಶ್ರೀ,ರಾಜು, ಬಾಲಾಜಿ, ರಮೇಶ ಬೋಚಾರೆ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು ಇನ್ನಿತರರು ಇದ್ದರು.
Comments are closed.