ತೆರದ ಬಾವಿ ನಿರ್ಮಾಣ ಕಾಮಗಾರಿಗೆ ಜಿ.ಪಂ ಹರ್ಷಾನಂದ ಗುತ್ತೇದಾರ ಚಾಲನೆ
ತೆರದ ಬಾವಿ ಕೊರೆದು ನೀರಿನ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸುವ ಕಾಮಗಾರಿ
ಆಳಂದ ತಾಲೂಕಿನ ಮಾದನಹಿಪ್ಪರ್ಗಾ ಜಿ.ಪಂ ವ್ಯಾಪ್ತಿಯ ಕೆರೂರ ಗ್ರಾಮದಲ್ಲಿ ತೆರದ ಬಾವಿ ಕೊರೆದು ನೀರಿನ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಜಿ.ಪಂ ಹರ್ಷಾನಂದ ಎಸ್ ಗುತ್ತೇದಾರ ಚಾಲನೆ ಮಂಗಳವಾರ ನೀಡಿದರು.
ಶಾಸಕರ ವಿಶೇಷ ಅನುದಾನದಲ್ಲಿ ರೂ 40 ಲಕ್ಷ. ರೂ. ಗಳಲ್ಲಿ ಕೈಗೊಂಡಿರುವ ಕಾಮಗಾರಿಯು ಕೆರೂರ ಗ್ರಾಮದ ನೀರಿನ ಸಮಸ್ಯೆಯನ್ನು ನಿವಾರಿಸಲಿದೆ ಅಲ್ಲದೇ ಬೇಸಿಗೆ ಕಾಲದಲ್ಲಿ ಜನರು ಕುಡಿಯುವ ನೀರಿಗಾಗಿ ಪಡುತ್ತಿರುವ ಬವಣೆಯನ್ನು ದೂರ ಮಾಡಲಿದೆ ಎಂದು ತಿಳಿಸಿದರು.
ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಅವರು ತಾಲೂಕಿನ ಪ್ರತಿ ಹಳ್ಳಿಗಳ ಸಮಸ್ಯೆಗಳನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಬಗೆ ಹರಿಸಲು ಪ್ರಯತ್ನಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಜನರ ಸಹಕಾರವು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತ ಪಾಟೀಲ ನಿಂಬಾಳ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಗ್ರಾ.ಪಂ ಸದಸ್ಯ ವಿಶ್ವನಾಥ ಕೆರೂರ, ಸದಾನಂದ ಮೂಲಗೆ, ಮುಖಂಡ ಅಪ್ಪಾಶಾ ಕೆರೂರ, ಎಇಇ ಚಂದ್ರಮೌಳಿ, ಜೆಇ ಚಂದ್ರಕಾಂತ ಬಿರಾದಾರ ಸೇರಿದಂತೆ ಇತರರು ಇದ್ದರು.
Comments are closed.