ಈ ಪ್ರಶ್ನೆ ಪ್ರತಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮುನ್ನಲೆಗೆ ಬರುತ್ತದೆ. ಮತ್ತೆ ಚುನಾವಣೆಯಾದ ಮೇಲೆ ಮುಂದಿನ ಚುನಾವಣೆಯವರೆಗೆ ತನ್ನ ವಾಸ ಸ್ಥಾನದಲ್ಲಿ ಹಾಸಿಗೆ ಹೊದ್ದುಕೊಂಡು ಗಡದ್ದಾಗಿ ನಿದ್ದೆ ಹೋಗುತ್ತದೆ. ಈ ವಿಷಯವನ್ನು ಎತ್ತಿದ ಮಹಾನುಭಾವರು ಕೂಡ ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಇದ್ದು ಬಿಡುತ್ತಾರೆ. ಹಾಗಾದರೇ ನಿಜವಾಗಿಯೂ ಸಾಹಿತ್ಯ ಪರಿಷತನ ಸಾರಥಿ ಯಾರಾಗಬೇಕು?.
ನಾಲ್ಕಾರು ಪುಸ್ತಕಗಳನ್ನು ಬರೆದು ಲೇಖಕ ಎಂದು ಗುರುಸಿಕೊಂಡವರಾ? ಕವನ ಸಂಕಲನಗಳನ್ನು ಪ್ರಕಟಿಸಿ ಕವಿ ಏನಿಸಿಕೊಂಡವರಾ?. ವೇದಿಕೆಯ ಮೇಲೆ ಏರಿ ಕನ್ನಡದ ಬಗ್ಗೆ ಭಾಷಣ ಮಾಡುವವರಾ?. ಪ್ರತಿಯೊಂದು ವಿಷಯಕ್ಕೆ ನನ್ನದೂ ಒಂದು ಇರಲಿ ಎಂದು ಮೂಗು ತೋರಿಸಿ ತಮ್ಮ ಅಭಿಪ್ರಾಯ ದಾಖಲಿಸುವವರಾ?. ಹತ್ತಾರು ಜನರಿಂದ ಲೇಖನ ಬರೆಯಿಸಿ ಅವುಗಳನ್ನು ಒಟ್ಟು ಮಾಡಿ ಸಂಪಾದಕ ಎಂದು ಕರೆಯಿಸಿಕೊಂಡವರಾ?. ಸಂಘಟನೆಗಳ ಮುಖವಾಡ ಹೊತ್ತು ಎಲ್ಲವೂ ನನ್ನ ಕೇಳಿಯೇ ಅಥವಾ ನನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂಬ ಮನೋಭಾವವುಳ್ಳವರಾ?. ಈ ಹಿಂದಿನ ಅಧ್ಯಕ್ಷ ಸಾಹಿತಿಯಲ್ಲದಿದ್ದರೂ ಅಧಿಕಾರದ ಆಸೆಗಾಗಿ 2-3 ಸಲ ಅವನ ಕೈ ಕೆಳಗೆಯೇ ಕೆಲಸ ಮಾಡಿ ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷನಾಗಬೇಕು ಎಂಬ ಆಸೆಯಿಂದ ಹಿಂದಿನ ಅಧ್ಯಕ್ಷನನ್ನು ದೂರುವ ದೂರುದಾರರಾ?. ಹೀಗೆ ಪಟ್ಟಿ ಅವರಾ ಇವರಾ ಅಂತ ಬೆಳೆಯುತ್ತಾ ಹೋಗುತ್ತದೆ.
ಹಾಗಾದರೆ ಯಾರು ಸಾಹಿತ್ಯ ಪರಿಷತ್ ಸಾರಥಿಯಾಬೇಕು. ಸಾಹಿತಿ ಅಲ್ಲದಿದ್ದರೂ ಪರಿಷತ್‍ನ ಉದ್ದೇಶ, ಗುರಿ, ಕಾರ್ಯಚಟುವಟಿಕೆಗಳ ಅರಿವಿರಬೇಕು. ಸದಾ ಕಾಲ ಸಮಾಜದಲ್ಲಿ ನಡೆಯುವ ಸಾಹಿತ್ಯ, ಸಂಸ್ಕøತಿಯಂಥ ಚಟುವಟಿಕೆಗಳಲ್ಲಿ ಯಾವುದೇ ಬೇಧ ಭಾವ, ಪಕ್ಷ- ಪಂಥ, ಇಜಂ ಇಲ್ಲದೇ ಭಾಗವಹಿಸಿ ಅದನ್ನು ಆನಂದಿಸಬೇಕು. ಅಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ಸ್ವತಹ ತಾವೇ ಇತರೆ ಸಮಾನ ಮನಸ್ಕರ ಅಥವಾ ದಾನಿಗಳ ಸಹಕಾರದೊಂದಿಗೆ ಆಯೋಜಿಸಬೇಕು. ನಾಡು ನುಡಿಯ ಬಗ್ಗೆ ತನ್ನದೇ ಆದ ಒಂದು ಸ್ಪಷ್ಟ ನಿಲುವು ಹೊಂದಿರಬೇಕು. ಸಂದರ್ಭ ಬಂದಾಗ ಖಂಡಿಸುವ, ಸಮರ್ಥಿಸಿಕೊಳ್ಳುವ ಛಾತಿ ಬೆಳಸಿಕೊಂಡಿರಬೇಕು. ಒಟ್ಟಿನಲ್ಲಿ ಸಾಹಿತ್ಯ ಪರಿಷತನ ಕಾರ್ಯ, ಚಟುವಟಿಕೆ, ಉದ್ದೇಶ, ಗುರಿ ಅರಿತವರು ಮಾತ್ರ ಪರಿಷತನ ಸಾರಥಿಯಾಗಲಿ.
Next Post
Comments are closed.