Shubhashaya News

ಕೋಲಿ ಸಮಾಜದ ಮಹಿಳಾ ಅಧ್ಯಕ್ಷೆಯಾಗಿ ರೇಖಾ ಆಯ್ಕೆ

ಚಿತ್ತಾಪುರ: ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ನಡೆದ ಕೋಲಿ ಸಮಾಜದ ಸಭೆಯಲ್ಲಿ ತಾಲೂಕು ಕೋಲಿ ಸಮಾಜದ ಮಹಿಳಾ ಅಧ್ಯಕ್ಷೆಯಾಗಿ ರೇಖಾ ತಳವಾರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಮಾಜಿ ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ತಿಳಿಸಿದ್ದಾರೆ.

ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ನಿರ್ದೇಶಕ ಶರಣಪ್ಪ ನಾಟೀಕಾರ, ಬಿಜೆಪಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಮುಖಂಡರಾದ ಹಣಮಂತ ಸಂಕನೂರ, ಭೀಮಣ್ಣ ಸೀಬಾ, ರಾಮಲಿಂಗ ಬಾನರ್, ಅಣ್ಣಾರಾವ ಸಣ್ಣೂರಕರ್, ಕಾಶಪ್ಪ ಡೋಣಗಾಂವ, ಸಾಬಣ್ಣ ಡಿಗ್ಗಿ ಇದ್ದರು.

Comments are closed.

Don`t copy text!