Shubhashaya News

5.30 ಕೋಟಿ ವೆಚ್ಚದ ಬೆಳಗುಂಪಾ-ಮುಗುಟಾವರೆಗೆ 5 ಕಿ.ಮೀ ರಸ್ತೆ ಕಾಮಗಾರಿಗೆ ಸಾಲಿ ಚಾಲನೆ.

ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಜತೆಗೆ ರೈತರಿಗೂ ಅನುಕೂಲ: ಮರಗೋಳ

ಚಿತ್ತಾಪುರ: ತಾಲೂಕಿನ ಮುಗುಟ ಗ್ರಾಮದ ಹೊರವಲಯದಲ್ಲಿ ಬೆಳಗುಂಪಾ-ಮುಗುಟಾ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅಡಿಗಲ್ಲು ನೆರವೇರಿಸಿದರು.

ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಶಾಸಕ ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದ ಜನರಿಗೆ ಮೂಲಸೌಲಭ್ಯಗಳು ಕಲ್ಪಿಸಲು ಬದ್ಧರಾಗಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.
ತಾಲೂಕಿನ ಮುಗುಟ ಗ್ರಾಮದ ಹೊರವಲಯದಲ್ಲಿ 2019-20ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆಯಡಿ 5.30 ಕೋಟಿ ರೂ. ವೆಚ್ಚದಲ್ಲಿ ಬೆಳಗುಂಪಾ-ಮುಗುಟಾ ಗ್ರಾಮದವರೆಗಿನ 5 ಕಿ.ಮೀ ರಸ್ತೆ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣದಿಂದಾಗಿ ಸುತ್ತಲಿನ ಹತ್ತಾರು ಗ್ರಾಮಗಳ ಸಾರ್ವಜನಿಕರ ಜತೆಗೆ ಹೊಲಗಳಿಗೆ ಹೋಗಲು ರೈತರಿಗೂ ಅನುಕೂಲವಾಗಲಿದೆ. ಬೆಳಗುಂಪಾದ ಸುತ್ತಯಿರುವ ಎಲ್ಲ ಗ್ರಾಮದ ಜನರಿಗೆ ಕಲಬುರಗಿಗೆ ಹೋಗಲು ಸಮೀಪದ ರಸ್ತೆಯಾಗಿದೆ. ಇದರ ಸೌಲಭ್ಯ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಅಧಿವೇಶನ ನಡೆಯುತ್ತಿರುವುದರಿಂದ ಇಲ್ಲಿನ ಜನಪ್ರತಿನಿಧಿಗಳ ಜತೆಗೆ ಗ್ರಾಮಸ್ಥರೊಂದಿಗೆ ಕಾಮಗಾರಿ ಆರಂಭಿಸಲು ಶಾಸಕ ಖರ್ಗೆ ಅವರು ಅದೇಶದ ಮೇರೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಪಂ ಮಾಜಿ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಮುಖಂಡ ರಾಜಶೇಖರ ತಿಮ್ಮನಾಕ್ ಮಾತನಾಡಿದರು.
ಮುಖಂಡರಾದ ಸುನೀಲ ದೊಡ್ಮನಿ, ಮಲ್ಲಪ್ಪ ಹೊಸ್ಮನಿ ಇಂಗನಕಲ್, ಯಲ್ಲಾಲಿಂಗ ಬೆಂಕಿ, ಅಯ್ಯಮ್ಮ ರಾವೂರ, ಬಸವರಾಜ ಹಾಲಕಾಯಿ, ಪೀರಪ್ಪ ದೊಡ್ಮನಿ, ಸಲೀಮಸಾಬ, ಹಸನ ಪಟೇಲ್, ಶಮಿ ಪಟೇಲ್, ಮಸೂದ ಪಟೇಲ್, ಸೈಯದ್ ಪಟೇಲ್, ಈರಣ್ಣ ದಂಡೋತಿ, ಹಣಮಂತ, ಇಲಾಖೆ ಎಇ ಅಜಯ ರಾಠೋಡ, ಜೆಇ ಶ್ಯಾಮ್ ಬಿರಾದಾರ, ಶಿವುಕುಮಾರ ಇದ್ದರು.
ರವಿ ನಿರೂಪಿಸಿ, ವಂದಿಸಿದರು.

Comments are closed.

Don`t copy text!