ಯಾದಗಿರಿ: ಜಿಲ್ಲೆಯ ಸುರಪುರ ತಾಲುಕಿನ ಸಮೀಪದ ಕಕ್ಕೇರಾ ಗ್ರಾಮದಲ್ಲಿ ಏಪ್ರಿಲ್ ಹದಿನೈದರವರೆಗು ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಲು ಪೂರ್ವಾಭಾವಿ ಸಭೆಯನ್ನು ಮಾಡಲಾಯಿತು.
ಕರ್ನಾಟಕ್ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ ಹಾಲಭಾವಿ ಭಾಗವಹಿಸಿ ಮಾತನಾಡಿ, ಜಗತ್ತಿಗೆ ಅನ್ನ ನೀಡುವ ರೈತರಿಗೆ ಯಾವುದೇ ಜಾತಿ ಇಲ್ಲ, ಇಲ್ಲಿ ಕೆಲವರು ರೈತರ ಮಧ್ಯೆ ಜಾತಿ ತಂದು ರೈತರು ಹೋರಾಟವನ್ನು ಹಿಮ್ಮೇಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರೈತರು ಜಾತ್ಯತೀತವಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ.
ಸದ್ಯ ರೈತರು ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ ಆದ್ದರಿಂದ ಬಸವಸಾಗರ ಜಲಾಶಯದಿಂದ ಕನಿಷ್ಠ ಏಪ್ರಿಲ್ 15ರವರೆಗೆ ಕಾಲುವೆಗೆ ನೀರು ಹರಿಸಿದಾಗ ಮಾತ್ರ ರೈತರು ಬೆಳೆದ ಬೆಳೆಗಳು ಕೈ ಸೇರುತ್ತವೆ ಸುರಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ರಾಜುಗೌಡ ರವರು ಪತ್ರಿಕೆಯಲ್ಲಿ ಹೇಳಿಕೆ ಕೊಡುವುದನ್ನು ಬಿಟ್ಟು ರೈತರೊಂದಿಗೆ ಹೋರಾಟಕ್ಕೆ ಬರಲಿ ಅನ್ನದಾತನಿಗೆ ನೀರು ಕಲ್ಪಿಸಿಕೊಡಲು ಶ್ರಮಿಸಲಿ ಎಂದರು.
Comments are closed.