Shubhashaya News

ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

ಸುರಪುರ ತಾಲೂಕಿನ ಕಕ್ಕೇರ ಪಟ್ಟಣದಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಇಂದು ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದ ಹನುಮಂತರಾಯ ಮಾಲಿಪಾಟೀಲ ಕ್ರಿಕೆಟ್ ಪಂದ್ಯಾವಳಿ ಮನುಷ್ಯ ಆರೋಗ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಆರೋಗ್ಯ ವೃದ್ಧಿಗೆ ಕ್ರೀಡೆ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಸೋಮನಾಥ ದೇವಸ್ಥಾನದ ಅರ್ಚಕರಾದ ಅಯ್ಯಣ್ಣ ತಾತ, ಹಾಗೂ ಉದ್ದಿಮೆದಾರರು ಸುನೀಲ ಶೆಟ್ಟಿ, ಪುರಸಭೆ ಸದಸ್ಯ ಶರಣು ಸೊಲ್ಲಾಪುರ, ಹಾಗೂ ಹಲವಾರು ಕ್ರಿಕೆಟ್ ಕ್ರೀಡಾಪಟುಗಳು ಭಾಗಿಯಾಗಿದ್ದರು.

Comments are closed.

Don`t copy text!