ಭಾರತೀಯರು ಬಳಸುವಂತಹ ಪ್ರತಿಯೊಂದು ಸಾಂಬಾರ ಪದಾರ್ಥದಲ್ಲೂ ಹಲವಾರು ಆರೋಗ್ಯ ಗುಣಗಳು ಅಡಗಿವೆ. ಹಿಂದಿನವರ ಜೀವನಶೈಲಿ ಮತ್ತು ಆಹಾರ ಕ್ರಮವನ್ನು ನೋಡಿದರೆ ಅವರ ಆರೋಗ್ಯದ ಗುಟ್ಟು ತಿಳಿದುಬರುವುದು. ಆದರೆ ಇಂದಿನ ಯುವಜನರು ಫಿಜ್ಜಾ, ಬರ್ಗರ್ ಎಂದು ಸಿಕ್ಕಿದೆಲ್ಲವನ್ನೂ ತಿಂದು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವ ಪರಿಣಾಮವಾಗಿ ಅನಾರೋಗ್ಯವು ಬೆನ್ನತ್ತಿ ಬರುತ್ತಿದೆ. ಹೀಗಾಗಿ ನಾವು ನಮ್ಮ ಹಿರಿಯರಂತೆ ದೈಹಿಕವಾಗಿ ಫಿಟ್ ಆಗಿರಲು ತುಂಬಾ ಕಷ್ಟಬೇಕಾಗುತ್ತದೆ. ಪ್ರತಿನಿತ್ಯವು ನಾವು ಅಡುಗೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥದಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ.
ಆಲಿಯಮ್ ಸ್ಯಾಟೀವಮ್, ಸಾಮಾನ್ಯವಾಗಿ ಬೆಳ್ಳುಳ್ಳಿ ಎಂದು ಪರಿಚಿತವಿರುವ ಈರುಳ್ಳಿ ಪಂಗಡ ಆಲಿಯಮ್‍ನಲ್ಲಿನ ಒಂದು ಜಾತಿ. ಅದರ ನಿಕಟ ಸಂಬಂಧಿಗಳು ಈರುಳ್ಳಿ, ಶ್ಯಾಲಟ್, ಲೀಕ್, ಚೈವ್ ಮತ್ತು ರ್‍ಯಾಕ್ಯೊವನ್ನು ಒಳಗೊಂಡಿವೆ. ೭,೦೦೦ ವರ್ಷಕ್ಕಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು ಮಧ್ಯ ಏಷ್ಯಾಕ್ಕೆ ಸ್ಥಳೀಯವಾಗಿದೆ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿ ಬಹಳ ಕಾಲದಿಂದ ಮುಖ್ಯ ಆಹಾರವಾಗಿದೆ, ಮತ್ತು ಏಷ್ಯಾ, ಆಫ಼್ರಿಕಾ, ಹಾಗು ಯೂರೋಪ್‍ನಲ್ಲಿ ಆಗಾಗ ಬಳಸುವ ರುಚಿಕಾರಕವಾಗಿದೆ.
ಉಪಯೋಗಗಳು
ಮೂಲ್ಯವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.
ಹಸಿವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಮಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶರೀರದಲ್ಲಿ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ದೇಹದ ಆಲ್ಯಸ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ.
ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.
ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಲ ಪ್ರಯೋಜನಕಾರಿಯಾಗಿದೆ.
ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ನಿಮ್ಮ ಆಹಾರ ಕ್ರಮದಲ್ಲಿ ಬೆಳ್ಳುಳ್ಳಿ ಸೇರಿಸಿಕೊಳ್ಳುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯಿರಿ. ಯಾವುದೇ ಔಷಧಿಗೆ ಬೆಳ್ಳುಳ್ಳಿಯು ಪರ್ಯಾಯವಲ್ಲ. ನೀವು ಔಷಧಿ ಸೇವನೆ ಮಾಡುತ್ತಲಿದ್ದರೆ ಆಗ ನೀವು ವೈದ್ಯರ ಸಲಹೆ ಪಾಲಿಸಿಕೊಂಡು ಹೋಗಿ. ಬೆಳ್ಳುಳ್ಳಿಯು ಔಷಧಿಯ ಕ್ರಿಯೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ನಿಮಗೆ ನೆರವಾಗುವುದು.
————-
ಮಹಾದೇವ ಬಿರಾದಾರ
ಚಮಕೇರಿ
Prev Post
Next Post
Comments are closed.