Shubhashaya News

ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನ

ರಾಜಕೀಯ ವೈಷಮ್ಯ ಹಿನ್ನೆಲೆ

ಯಾದಗಿರಿ: ರಾಜಕೀಯ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ.

ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಸಮೀಪ ನಿನ್ನೆ ರಾತ್ರಿ ಈ ದುರ್ಘಟನೆ ಜರುಗಿದೆ. ಬಸವಂತಪುರ ಗ್ರಾಮದ ಮಾಜಿ ಸದಸ್ಯ ಗೋವಿಂದ ಎಂಬುವವರ ಮೇಲೆ ಕೊಲೆ ಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಗೋವಿಂದ ಸದ್ಯ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಿನ್ನೆ ತಡ ರಾತ್ರಿ ಯಾದಗಿರಿಯಿಂದ ಬಸವಂತಪುರ ಕಡೆ ಬೈಕ್ ಮೇಲೆ ಗೋವಿಂದ ಹೊರಟಿದ್ದರು, ಈ ಮುದ್ನಾಳ ಗ್ರಾಮದ ಬೆಟ್ಟದ ಬಳಿ ಮೂವರು ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ, ಗೋವಿಂದನ ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಇದೇ ವೇಳೆ ಬೇರೆ ವಾಹನ ರಸ್ತೆಯಲ್ಲಿ ಬಂದ ಕಾರಣ, ಗಾಯಗೊಂಡ ಗೋವಿಂದನ್ನನ್ನು ಬಿಟ್ಟು ಪರಾರಿಯಾಗಿದ್ದಾರೆ. ಗೋವಿಂದನ ವಿರೋಧಿಗಳಾದ ಲಕ್ಷ್ಮಣ್ಣ,ದೇವಪ್ಪ ಎಂಬುವವರ ಜೊತೆ ನಿನ್ನೆ ಬೆಳಿಗ್ಗೆ ಗ್ರಾಮದ ಕಂಪೌಂಡ್ ನಿರ್ಮಾಣ ಮಾಡುವ ವಿಚಾರಕ್ಕೆ ಜೊತೆ ಜಗಳವಾಗಿತ್ತು.ಈ ವೇಳೆ ಗೋವಿಂದನಿಗೆ ಕೊಲೆ ಜೀವಬೇದರಿಕೆ ಸಹ ಹಾಕಲಾಗಿತ್ತು ಎನ್ನಲಾಗಿದೆ.

ಅಲ್ಲದೆ ಈ‌ ಹಿಂದೆ ಗ್ರಾಮ ಪಂಚಾಯತ ಚುನಾವಣೆ ವಿಚಾರದಲ್ಲಿ ಗೊವೀಂದ್ ಹಾಗೂ ಲಕ್ಷ್ಮಣ್ಣ,ದೇವಪ್ಪನ ನಡುವೆ ಗಲಾಟೆ ನಡೆದಿತ್ತು.ಗೋವಿಂದನ ಅಣ್ಣನ ಮಗಳಾದ ಲಕ್ಷ್ಮೀ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆದ್ದಿದ್ದಳು.ಆಕೆ ಎದುರಾಳಿ ಲಕ್ಷ್ಮಣ್ಣನ ಹೆಂಡತಿ ಶಾಂತಿ ಸೋತ್ತಿದ್ದಳು. ಇನ್ನೂ ಗೋವಿಂದನ ಕೊಲೆಗೆ ಬಸವಂತಪುರ ನಿವಾಸಿ ಗುರುಮಿಠಕಲ್ ಠಾಣೆಯ ಹೆಡ್ ಕಾನ್ಸಟೆಬಲ್ ವೆಂಕಟೇಶ್ ಎಂಬುವವರು ಕುಮ್ಮಕ್ಕಿ ನೀಡಿ, ಕೊಲೆಗೆ ಸುಪಾರಿ ನೀಡಿದ್ದಾರೆ ಅಂತ ಗೋವಿಂದನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ‌.

ಈ ಕುರಿತು ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

Don`t copy text!