ಚಿತ್ತಾಪುರ: ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ವಾಣಿಜ್ಯ ಉದ್ಯಮಿ ಸಂಘದ ವತಿಯಿಂದ ಎಚ್‍ಕೆಇ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೈಲಾಸ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಹಾಗೂ ತಾಲೂಕಿನಲ್ಲಿರುವ ಉದ್ಯಮಿಗಳ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ಹೈದ್ರಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಚುನಾವಣೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಪ್ರಶಾಂತ ಮಾನಕರ್ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಹೈದ್ರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮಾನಕರ್ ಪ್ಯಾನಲ್‍ನ ಎಲ್ಲ ಸದಸ್ಯರನ್ನು ಹೆಚ್ಚಿನ ಮತಗಳನ್ನು ಹಾಕಿ ಗೆಲ್ಲಿಸುವ ಮೂಲಕ ಈ ಭಾಗದ ಸಮಸ್ಯೆಗಳಿಗೆ ಮುನ್ನುಡಿಯಾಗಿ ಶ್ರಮಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಉದ್ಯಮಿಗಳಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಶಶಿಕಾಂತ ಪಾಟೀಲ್ ಮಾತನಾಡಿದರು.
ವರ್ತಕರ ಸಂಘದ ಅಧ್ಯಕ್ಷ ಅಣ್ಣಾರಾವ ಪಾಟೀಲ್ ಮುಡಬೂಳ, ಉದ್ಯಮಿಗಳಾದ ನಂದಕಿಶೋರ ಬಜಾಜ್, ರವೀಂದ್ರ ಸಜ್ಜನಶೆಟ್ಟಿ, ನಾಗರಾಜ ರೇಶ್ಮಿ, ವಿನೋದ್ ಗುತ್ತೇದಾರ, ಚಂದ್ರಶೇಖರ ಸಾತನೂರ, ವಿಶ್ವನಾಥ ಪಾಟೀಲ್, ಸೈಯದ್ ಜಫರುಲ್ ಹಸನ್, ಅಬ್ದುಲ್ ಸಲೀಂ, ಪ್ರವೀಣ ಪವಾರ್, ಸಿದ್ಧಲಿಂಗ ಅನವಾರ, ಸಿದ್ಧಲಿಂಗ ಚಾಳಿಕಾರ್, ಅಂಬ್ರೀಷ ಸುಲೇಗಾಂವ, ಅಬ್ದುಲ್ ಕರೀಂ ಸೇರಿದಂತೆ ಇತರರು ಇದ್ದರು.
ಶ್ರೀನಿವಾಸ ನೂಗಜಾ ಪ್ರಾಸ್ತವಿಕ ಮಾತನಾಡಿದರು.
ಸೈಯದ್ ನಿಜಾಮೋದ್ದಿನ್ ಚಿಸ್ತಿ ಸ್ವಾಗತಿಸಿದರು. ವೀರಸಂಗಪ್ಪ ಸುಲೇಗಾಂವ ನಿರೂಪಿಸಿ, ವಂದಿಸಿದರು.
Comments are closed.