ಚಿತ್ತಾಪುರ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ವಾಲ್ಮೀಕಿ ನಾಯಕ ಭಾವಚಿತ್ರಕ್ಕೆ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಂತಾಪ ಸಭೆ ನಡೆಸಲಾಯಿತು.
ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್ ವಾಲ್ಮೀಕಿ ನಾಯಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಾಲ್ಮೀಕಿ ನಾಯಕ ಸೈಕಲ್ ತುಳಿಯುವ ಮೂಲಕ ಚಿತ್ತಾಪುರ ಮತಕೇತ್ರದಲ್ಲಿ ಪ್ರಚಾರ ಮಾಡಿ ಬಿಜೆಪಿ ಪಕ್ಷವನ್ನು ಕಟ್ಟಿದ್ದರು. ತಮ್ಮಲ್ಲಿದ್ದ ರಾಜಕೀಯ ಬದ್ಧತೆ, ಪ್ರಾಮಾಣಿಕತೆ, ಪಕ್ಷ ನಿಷ್ಠೆ, ರಾಷ್ಟ್ರೀಯವಾದಿ ವಿಚಾರಗಳನ್ನು ಇಟ್ಟಿಕೊಂಡು ಎಲ್ಲರ ಮನಸ್ಸು ಗೆದ್ದಿದ್ದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಿಂದ ಗೆಲುವು ಸಾಧಿಸಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಇದೀಗ ಅವರನ್ನು ಕಳೆದುಕೊಂಡ ಚಿತ್ತಾಪುರ ತಾಲೂಕು ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡತ್ತಾಗಿದೆ ಎಂದು ಅವರು ಕಣ್ಣೀರು ಹಾಕಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸ್ಸುರ್‍ಕರ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕಾರ್ಯದರ್ಶಿ ನಾಗರಾಜ ಹೂಗಾರ, ಪುರಸಭೆ ಸದಸ್ಯರಾದ ಪ್ರಭು ಗಂಗಾಣಿ, ಶ್ಯಾಮ ಮೇಧಾ, ಮುಖಂಡರಾದ ರವೀಂದ್ರ ಸಜ್ಜನಶೇಟ್ಟಿ, ಬಾಲಾಜಿ ಬುರಬುರೆ, ಆನಂದ ನರಿಬೋಳ, ಹೀರಾ ಚವ್ಹಾಣ, ಕುನಾಲ್ ತುರೆ, ಅಕ್ಕಮಹಾದೇವಿ, ಕವಿತಾ ಚವ್ಹಾಣ, ಬಸವರಾಜ ಹೂಗಾರ, ರಮೇಶ ಕಾಳನೂರ, ರವಿ ಗೊಬ್ಬುರ್, ಸಿದ್ರಾಮಯ್ಯ ಗೊಂಬಿಮಠ, ಪಂಕಜ್, ರಾಜು ಕುಲಕರ್ಣಿ ಸೇರಿದಂತೆ ಇತರರು ಇದ್ದರು.
Comments are closed.