Shubhashaya News

ಕಲಿತ ಶಾಲೆಗೆ ಹಿಂದಿರುಗಿ ಸಹಕರಿಸುವ ಗುಣ ದೊಡ್ಡದು: ಹಳ್ಳದ

ಆಳಂದ: ಕೊಡಲಹಂಗರಗಾ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ನೀಡಿದ ಶೈಕ್ಷಣಿಕ ವಸ್ತುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರು ವಿತರಿಸಿ ಮಾತನಾಡಿದರು.

ಆಳಂದ: ಕಲಿತ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಎಲ್ಲಡೆ ಸಹಕರಿಸುತ್ತಿರುವ ಪಂರಪರೆ ಬೆಳೆಯುತ್ತಿರುವುದು ದೊಡ್ಡ ಗುಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರು ಹೇಳಿದರು.
ತಾಲೂಕಿನ ಕೊಡಲಹಂಗರಗಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಮಕ್ಕಳಿಗೆ ಬೆಲ್ಟ್, ಟಾಯ್, ಮತ್ತು ಗುರುತಿನ ಚೀಟಿ ದೇಣಿಗೆ ರೂಪದಲ್ಲಿ ನೀಡಿದ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಹ ಶಿಕ್ಷಣಕ್ಕಾಗಿ ಸರ್ಕಾರದ ಹಲವು ಯೋಜನೆಯ ಜೊತೆಗೆ ಸಮುದಾಯದ ಪಾಲು ಇದ್ದರೆ ಇನ್ನೂ ಪರಿಣಾಮಕಾರಿಯಾಗುವದು ಮತ್ತು ಮಕ್ಕಳಲ್ಲಿ ಶಿಸ್ತು ಬೆಳೆಯಲು ಸಹಾಯಕಾರಿಯಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆ ಶಾಲೆಗೆ ಸೌಂಡ್ಸ್ ಮತ್ತು ಸ್ಪೀಕರ್ ಸೆಟ್ ನ್ನು ರೇವಪ್ಪ ಶ್ರೀಮಂತ ಉದನೂರ ಅವರು ಶಾಲೆಗೆ ಕಾಣಿಕೆ ನೀಡಿದರು.
ಶಿಕ್ಷಣಾಧಿಕಾರಿಗಳ ಮತ್ತು ಶಾಲಾ ಸಿಬ್ಬಂದಿಗಳು ಶಾಲೆಗೆ ಈ ಕಾಣಿಕೆ ನೀಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಶರಣು ಭಾಲಖೆಡ ಸೇರಿ ಹಲವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷ ಭವನಾರಾವ ಕಲಶಟ್ಟಿ, ಮಹಾಂತಪ್ಪ ಕದರಗಿ, ರೂಪೇಶ್ ಕುಂಬಾರ, ಅಣವೀರ ಬಮನಳ್ಳಿ, ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆ, ಸಮನ್ವಯಾಧಿಕಾರಿ ಮಲ್ಲಿನಾಥ ಘೋಡಕೆ, ಸಿಆರ್‍ಪಿ ಬಸವರಾಜ್ ರೊಳೆ, ವೀರೇಶ ಬೋಳಶೆಟ್ಟಿ, ಮುಖ್ಯ ಶಿಕ್ಷಕಿ ಕುಲಕರ್ಣಿ, ಸಹ ಶಿಕ್ಷಕರು ಹಾಜರಿದ್ದರು. ಶಂಭುಲಿಂಗ ಕುಂಬಾರ ನಿರೂಪಿಸಿದರು. ಶಿಕ್ಷಕ ಪಟ್ಟಣ ಸ್ವಾಗತಿಸಿದರು.

Comments are closed.

Don`t copy text!