ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಯಾವ ಗ್ಯಾರಂಟಿಯೂ ನಿಲ್ಲುವುದಿಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಮುಂದಿನ ಎರಡೂವರೆ ವರ್ಷವೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ . ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಎಂಟೂವರೆ ವರ್ಷವೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ನಿನ್ನೆ ವಿಧಾನಸೌಧದ ಗ್ರ‍್ಯಾಂಡ್ ಮೆಟ್ಟಿಲು ಮೇಲೆ ನಡೆದ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಉದ್ಘಾಟನೆ ವೇಳೆ ಮಾತನಾಡಿದ ಡಿಸಿಎಂ, ಅನೇಕ ಜನರು ನನಗೆ ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ದವಾಗಿದ್ದೇವೆ.ನಮಗೆ ಉಚಿತ ಪ್ರಯಾಣ ಬೇಡ ಎಂದು ಮೆಸೇಜ್ ಹಾಕಿದ್ದಾರೆ. ನಾವು ಟಿಕೆಟ್‌ಗೆ ದುಡ್ಡು ಕೊಡುತ್ತೇವೆ ಆದರೆ ಬಸ್‌ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
Comments are closed.