ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಕಿನ ಹಬ್ಬ ದೀಪಾವಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಾಡಬಂಧುಗಳಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ಸಂಭ್ರಮ – ಸಡಗರದಿಂದ ದೀಪಾವಳಿಯನ್ನು ಸಂಭ್ರಮಿಸೋಣ, ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ. ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೆಳಕು ಬೆಳಗುವ ಈ ಹಬ್ಬವನ್ನು ಹಣತೆಗಳೊಂದಿಗೆ ಆಚರಿಸೋಣ. ಘನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಎಲ್ಲರೂ ತಪ್ಪದೆ ಪಾಲಿಸಿ, ಸುರಕ್ಷಿತವಾಗಿರಿ” ಎಂದು ತಿಳಿಸಿದ್ದಾರೆ.
Comments are closed.