ಆಳಂದ: ಪಟ್ಟಣದ ತಾಲೂಕು ಆಡಳಿತಸೌಧನಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸಕ ಡಿ.ಎನ್. ಪಾಟೀಲ ಮಾತನಾಡಿದರು. ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಬಿ.ಜಿ. ಕುದರಿ, ಇಒ ಮಾನಪ್ಪ ಕಟ್ಟಿಮನಿ, ಬಿಇಒ ಸಿ.ಜಿ.ಹಳ್ಳದ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಇದ್ದರು.
ಆಳಂದ: ನಮ್ಮ ಹೆಮ್ಮೆಯ ಕನ್ನಡ ನಾಡು ಮತ್ತು ಸಾಂಸ್ಕøತಿಕ ಪರಂಪರೆ ಇಂದಿಗೂ ಜೀವಂತವಾಗಿರಬೇಕು. ಇದು ಕೇವಲ ಒಂದು ಭಾμÁ ಹಬ್ಬವμÉ್ಟೀ ಅಲ್ಲ, ನಮ್ಮ ಕನ್ನಡಿಗರ ಆತ್ಮನಿμÉ್ಠ ಮತ್ತು ಆಭಿಮಾನವನ್ನು ಸಂಭ್ರಮಿಸುವುದು,” ಎಂದು ಉಪನ್ಯಾಸಕ ಹಾಗೂ ನೆಲ್ಲೂರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ, ಡಿ.ಎನ್. ಪಾಟೀಲ್ ಅವರು ಹೇಳಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತ ಭವನದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ಇಂದು ಕನ್ನಡಗರ ಒಗ್ಗೂಡುವಿಕೆ ಅಗತ್ಯವಿದೆ. ಇದರಿಂದ ಸರ್ವದರಲ್ಲೂ ಬಲಾಡ್ಯ ಶಕ್ತಿಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಕನ್ನಡ ನಾಡಿನ ವಿಶಾಲ ಪರಂಪರೆ ಮತ್ತು ನಾವು ಹೆಮ್ಮೆ ಪಡುವಂತಹ ಎಲ್ಲಾ ಸಾಧನೆಗಳು ನಮ್ಮ ನಾಡಿನ ಪರಂಪರೆಯನ್ನು ಬಲಗೊಳಿಸುತ್ತವೆ. ಕನ್ನಡ ಕೇವಲ ಭಾμÉಯಲ್ಲ, ಅದು ಬದುಕನ್ನು ಕಟ್ಟುವ ಶಕ್ತಿಯಾಗಿದೆ” ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಹಣಮಂತ್ ಶೇರಿಯವರು ಮಾತನಾಡಿ, ಕನ್ನಡ ಅಳಿವು ಉಳಿವಿಗೆ ಸರ್ಕಾರ ಮತ್ತು ಅಧಿಕಾರಿಗಳ ಹೊಣೆಯಲ್ಲ ಜನಸಾಮಾನ್ಯ ಕನ್ನಡಿಗರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಇಂದು ಕನ್ನಡ ರಾಜ್ಯೋತ್ಸವವು ಕನ್ನಡಿಗರಿಗೆ ಸಾಂಸ್ಕøತಿಕ ಮತ್ತು ಸಾಮಾಜಿಕ ಜಾಗೃತಿಯ ಹಬ್ಬವಾಗಿದೆ. ಆಧುನಿಕತೆ ಮತ್ತು ತಂತ್ರಜ್ಞಾನ ಹೀಗೇ ಬೆಳೆಯಲಿ, ನಮ್ಮ ಭಾμÉಯ ಮತ್ತು ಸಂಸ್ಕøತಿಯ ಉಳಿವು ನಮ್ಮ ಮುಂದಿನ ಪೀಳಿಗೆಯ ಹೊಣೆ,” ಎಂದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮಾತನಾಡಿ, “ನಮ್ಮ ನಾಡು ಏನೆಲ್ಲಾ ಪ್ರತಿಭೆಗಳನ್ನು ನೀಡಿದೆಯೋ ಅದು ಕನ್ನಡಿಗರು ಜೀವನದ ಎಲ್ಲ ಕ್ಷೇತ್ರಗಳಲ್ಲಿ ತಾವು ಹೆಜ್ಜೆಹಾಕಿದಂತೆ ಉತ್ತಮ ಸಾಧನೆಗಳನ್ನು ದಾಖಲಿಸುತ್ತಿರುವುದಕ್ಕೆ ಪ್ರತೀಕವಾಗಿದೆ. ಕನ್ನಡ ನಾಡು ಸಾಂಸ್ಕøತಿಕವಾಗಿ ಶ್ರೇಷ್ಠತೆಯ ಗುಣಪೂರ್ಣ ಪರಂಪರೆಯನ್ನು ಸಾಗಿಸುತ್ತಿದೆ, ಈ ರಾಜ್ಯೋತ್ಸವದಿಂದ ಕನ್ನಡ ಭಾμÉ ಮತ್ತು ಸಂಸ್ಕøತಿಗೆ ನಾವು ಕೊಡಬೇಕಾದ ಗೌರವವನ್ನು ಮುಂದುವರೆಸೋಣಾ ಎಂದರು.
ತಹಸೀಲ್ದಾರ ಅಣ್ಣಾರಾವ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ, ಗ್ರೇಡ್-2 ತಹಸೀಲ್ದಾರ ಬಿ.ಜಿ. ಕುದರಿ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹೊನ್ನಪ್ಪಗೊಳ, ಕರವೇ ಮುಖಂಡ ಈರಣ್ಣಾ ಜಿ. ಆಳಂದ, ಅಧ್ಯಕ್ಷ ಸಚೀನ ಕಮಲಾನಗರ, ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ ಬಿಲಗುಂದಿ, ಮುಖಂಡರು ಇನ್ನಿತರು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆ ಸಿಆರ್‍ಪಿ ವರೇಶ ಬೋಳಶೆಟ್ಟಿ ನಿರೂಪಿಸಿದರು. ಶಿರಸ್ತೆದಾರ ರಾಕೇಶ ಶೀಲವಂತ ವಂದಿಸಿದರು.
ವೇದಿಕೆಗೆ ಸೀಮಿತವಾದ ರಾಜ್ಯೋತ್ಸವ:
ತಾಲ್ಲೂಕು ಆಡಳಿತದಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗಿತ್ತು. ಬಹಳಷ್ಟು ಇಲಾಖೆ ಅಧಿಕಾರಿಗಳು ಗೈರು, ಬೆರಳೆಣಿಕೆಷ್ಟೇ ಜನರಿದ್ದು, ನಾಗರಿಕ ಮುಖಂಡರಿಗೆ ಆಮಂತ್ರಣ ನೀಡದೆ ಇರುವುದು. ಪ್ರತಿವರ್ಷ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತಿತ್ತು. ಈ ಸಲ ನಡೆದೆ ಇರುವುದಕ್ಕೆ ಕನ್ನಡ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಸೂರಜ್ ಪತಂಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಧರ
Comments are closed.