ಆಳಂದ: ಭೂಸನೂರ ಸಕ್ಕರೆ ಕಾರ್ಖಾನೆ ಮಾರ್ಗದಲ್ಲಿ ನಿರ್ಮಾಣಗೊಂಡ ನೀಲಾಂಬಿಕಾ ಕಲ್ಯಾಣ ಮಂಟಪ ಉದ್ಘಾಟನೆಗೆ ಸಜ್ಜಾಗಿದೆ.
ಆಳಂದ: ಭೂಸನೂರ ಗ್ರಾಮದ ಸಕ್ಕರೆ ಕಾರ್ಖಾನೆ ಮಾರ್ಗದಲ್ಲಿ ನಿರ್ಮಿಸಿದ ನೀಲಾಂಬಿಕ ನೂತನ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ನಿಮಿತ್ತ ನವೆಂಬರ್ 2ರಿಂದ10ವರೆಗೆ ಶರಣರ ಕಾಯಕ ಜೀವನ ಪ್ರವಚನ ಪ್ರತಿದಿನ ಸಂಜೆ 7:30ಗಂಟೆಗೆ ಜರುಗಲಿದೆ.
ಈ ಕುರಿತು ಪ್ರತ್ರಿಕಾ ಪ್ರಕಟಣೆ ನೀಡಿರುವ ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಜ್ಯೋತಿ ರಾಜಶೇಖರ ಯಂಕಂಚಿ ಅವರು ತಿಳಿಸಿದ್ದಾರೆ.
ನ.2ರಂದು ಕಲ್ಯಾಣ ಮಂಟಪದ ಶೀ ಮÀಡಿವಾಳೇಶ್ವರ ಮಹಾಸ್ವಾಮಿಗಳ ವೇದಿಕೆಯಲ್ಲಿ ಶರಣರ ಕಾಯಕ ಜೀವನ ಪ್ರವಚನವನ್ನು ಹುಲಸೂರ ವಿರಕ್ತ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಉದ್ಘಾಟಿಸುವರು. ಖ್ಯಾತ ಪ್ರವಚನಕಾರ ಮುಂಡಗೋಡ ತಾಲೂಕಿನ ಬಸವಧಾಮದ ಬಸವೇಶ್ವರಿ ಮಾತಾಜಿಯಿಂದ ಪ್ರವಚನ ಸಾಗಿಬರಲಿದೆ. ಖ್ಯಾತ ಕಲಾವಿದ ಶಂಕರದೇಸಾಯಿ ಕಲ್ಲೂರ, ತಬಲಾ ಸಾಥಿ ಸಿದ್ಧಣ್ಣಾ ದೇಸಾಯಿ ಕಲ್ಲೂರಿಂದ ನಡೆಯಲಿದೆ. ಈ ಕಾರ್ಯಾಕ್ರಮಕ್ಕೆ ಮಾಡಿಯಾಳ ಮಠದ ಶ್ರೀ ಮರುಳಸಿದ್ಧ ಶ್ರೀ, ಭರತನೂರ ಮಠದ ಗುರುನಂಜೇಶ್ವರ ಶ್ರೀ, ದೇವಂತಗಿ ಮಠದ ರೇಣುಕ ಶಿವಾಚಾರ್ಯರು, ಭೂಸನೂರ ಮಠದ ಬಸವಲಿಂಗ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಗ್ರಾಪಂ ಅಧ್ಯಕ್ಷ ರೇಣಕಾ ಶ್ರೀಶೈಲ ಯಂಕಂಚಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ನ.10ರಂದು ಬೆಳಗಿನ 11:ಗಂಟೆಗೆ ನೀಲಾಂಬಿಕಾ ಕಲ್ಯಾಣ ಮಂಟಪ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಕೈಗೊಳ್ಳುವರು. ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣವನ್ನು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ವಹಿಸಲಿದ್ದಾರೆ ಎಂದು ಹೇಳಿದರು.
ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು ವಹಿಸುವರು. ಇಲಕಲ್ ಚಿತರಗಿಯ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಮಹಾಸ್ವಾಮಿಗಳು ಮತ್ತು ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಸೊನ್ನ, ಜೇವರ್ಗಿ ಸೊನ್ನ ಮಠದ ಶಿವಾನಂದ ಮಹಾಸ್ವಾಮಿಗಳು, ಹುಲಸೂರ ಮಠದ ಶಿವಾನಂದ ಮಹಾಸ್ವಾಮಿಗಳು, ಗುರುಮಿಟಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಹಾಅಗೂ ಸೋಲಾಪೂರ ಕರಿಟೇಶ್ವರ ವಿರಕ್ತ ಮಠದ ಸ್ವಾಮಿನಾಆಥ ಮಹಾಸ್ವಾಮೀಗಳು ವಹಿಸುವರು ಎಂದು ಹೇಳಿದ್ದಾರೆ.
ಸಮ್ಮುಖವನ್ನು ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು, ನಿರಗುಡಿಯ ಹವಾ ಮಲ್ಲಯ್ಯಾ ಮುತ್ತ್ಯಾ ಸೇರಿದಂತೆ ತಾಲೂಕು ಸೇರಿ ನಾಡಿನ ವಿವಿಧ ಪಠಾಧೀಶರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಸಂಸದ ಸಾಗರ ಈಶ್ವರ ಖಂಡ್ರೆ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಬಸವರಾಜ ಮತ್ತಿಮೂಡ, ಅಲ್ಲಂಪ್ರಭು ಪಾಟೀಲ, ಎಂ.ವೈ. ಪಾಟೀಲ, ಎಂಎಲ್‍ಸಿ ಜಗದೇವ ಗುತ್ತೇದಾರ, ಆರ್.ಕೆ. ಪಾಟೀಲ, ಎಚ್‍ಕೆಇ ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಎನ್‍ಎಸ್‍ಎಲ್ ವಿಪಿ ಭಾಸ್ಕರ್ ಬಾಯ್ಡು, ಬಾಬುರಾವ್ ಎಸ್.ಪಾಟೀಲ ಭೂಸನೂರ, ಸಿಂದಗಿ ಮಾಜಿ ಶಾಸಕ ರಮೇಶ ಭಸನೂರ, ಅಕ್ಕಲಕೋಟ ಮಾಜಿ ಶಾಸಕ ಸಿದ್ಧರಾಮ ಮೇತ್ರೆ, ಜಿಲ್ಲಾ ಹಾಪ್‍ಕಾಮ್ ಅಧ್ಯಕ್ಷ ಗುರುಶಾಂತ ವಿ. ಪಾಟೀಲ ಆಗಮಿಸಿಲಿದ್ದಾರೆ ಎಂದು ತಿಳಿಸಿದರು. ಅತಿಥಿಗಳಾಗಿ ಜಿಲ್ಲಾ ಮತ್ತು ತಾಲೂಕಿನ ಗಣ್ಯರು, ಸಾಹಿತಿಗಳು, ಕಲಾವಿದರು ಆಗಮಸಲಿದ್ದು, ಡಾ. ನೀಲಾಂಬಿಕಾ ರಾಜಶೇಖರ ಯಂಕಂಚಿ ಕಾರ್ಯಕ್ರಮ ನಿರೂಪಿಸುವರು. ನ.2ರಿಂದ 10ವರೆಗೆ ನಡೆಯುವ ಪ್ರವಚನ ಮತ್ತು 10ರಂದು ನಡೆಯುವ ಕಲ್ಯಾಣ ಮಂಟಪ ಉದ್ಘಾಟನೆ ಬಸವೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಶರಣೆ ಜ್ಯೋತಿ ರಾಜಶೇಖರ ಯಂಕಂಚಿ ಅವರು ಮನವಿ ಮಾಡಿದ್ದಾರೆ.
ಜನ ಸೇವೆ ಕಲ್ಯಾಣ ಮಂಟಪ:
ಭೂಸನೂರ ವಲಯದ ನೆರೆ, ಹೊರೆಯ ಹಳ್ಳಿಯ ಜನ ಸಾಮಾನ್ಯರಿಗೆ ಸಭೆ, ಸಮಾರಂಭ ಕೈಗೊಳ್ಳಲು ಅನುಕೂಲ ಕಲ್ಪಿಸುವ ಜನ ಸೇವೆಯ ಉದ್ದೇಶದಿಂದ ನಿರ್ಮಿಸಿದ ನೀಲಾಂಬಿಕ ಕಲ್ಯಾಣ ಮಂಟಪ ಲೋಕಾರ್ಪಣೆ ನಡೆಯಲಿದೆ. ಅಲ್ಲದೆ, ವಿಶ್ವಗುರು ಬಸವೇಶ್ವರ ಮೂರ್ತಿಯ ಲೋಕಾರ್ಪಣೆ ಸಮಾರಂಭದ ನಿಮಿತ್ತ ಹಮ್ಮಿಕೊಂಡ 10 ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕøತಿಕ ಖ್ಯಾತ ಕಲಾವಿದರ ಸಂಗೀತ ಕಾರ್ಯಕ್ರಮಕ್ಕೆ ಆಗಮಿಸುವ ನಾಡಿನ ಹರ,ಗುರು ಚರಮೂರ್ತಿಗಳ ದರ್ಶನಾಶೀರ್ವಾದ ಪಡೆದು ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಲು ಮನವಿ.
ಜ್ಯೋತಿ ರಾಜಶೇಖರ ಯಂಕಂಚಿ
ಅಧ್ಯಕ್ಷರು, ಬಸವ ಸೇವಾ ಪ್ರತಿಷ್ಠಾನ ಭೂಸನೂರ
Comments are closed.