Shubhashaya News

221 ಅಡಿ ಉದ್ದದ ಕನ್ನಡ ಧ್ವಜದ ಭವ್ಯ ಮೆರವಣಿಗೆ ಸಡಗರ ಸಂಭ್ರಮ ಮಧ್ಯ ನಿಂಬರಗಾದಲ್ಲಿ ಕನ್ನಡ ರಾಜ್ಯೋತ್ಸವ

ಆಳಂದ: ನಿಂಬರ್ಗಾದಲ್ಲಿ ಕರವೇ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಠಾಧೀಶರು, ನಾಗರಿಕರು ವಿದ್ಯಾರ್ಥಿಗಳಿದ್ದರು.

ಆಳಂದ: ನಿಂಬರ್ಗಾ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ವತಿಯಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮದ ಆಚರಣೆ ನಡೆಯಿತು. ಕರವೇ ವಲಯದ ಅಧ್ಯಕ್ಷ ಬಸವರಾಜ ಯಳಸಂಗಿಯವರ ನೇತೃತ್ವದಲ್ಲಿ 221 ಅಡಿ ಉದ್ದದ ಕನ್ನಡ ಧ್ವಜದ ಭವ್ಯ ಮೆರವಣಿಗೆ ಏರ್ಪಡಿಸಲಾಯಿತು, ಇದು ಪ್ರೇಕ್ಷಕರ ಮನಸ್ಸು ಗೆದ್ದಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಶ್ರೀ ನೀಲಕಂಠ ಶಿವಾಚಾರ್ಯರು ಹಾಗೂ ವಿರಕ್ತಮಠದ ಶ್ರೀ ಶಿವಲಿಂಗ ದೇವರ ದಿವ್ಯ ಸಾನಿಧ್ಯ ವಹಿಸಿದ್ದರು. ಅಲ್ಲದೆ, ಪಿಎಸೈ ಇಂದುಬಾಯಿ, ಉಪತಹಶೀಲ್ದಾರ ಆರ್. ಮಹೇಶ, ಗ್ರಾಮದ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿ, ಕನ್ನಡದ ಮಹತ್ವವನ್ನು ಪ್ರಚಾರ ಮಾಡಿದರು.
ವಿಶೇಷ ಅತಿಥಿಗಳಾಗಿ ಸಂಘಟನೆಯ ಪ್ರಮುಖರಾದ ಪ್ರವೀಣ ಮಿಟೆಕಾರ, ಕ್ಷೇಮಲಿಂಗ ಕಂಬಾರ, ಶ್ರೀಶೈಲ ನಿಗಶೆಟ್ಟಿ, ಸಾಗರ ದುರ್ಗದ, ಮಹಾದೇವ ಮಿಟೆಕಾರ ಮತ್ತು ಧರ್ಮರಾಯ ವಗ್ದರ್ಗಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಕಾರ್ಯಕ್ರಮವು ನಿಂಬರ್ಗಾದಲ್ಲಿ ಕನ್ನಡ ಬಾವುಟದ ಮಹಿಮೆ ಹಾಗೂ ರಾಜ್ಯೋತ್ಸವದ ಸಂಸ್ಕøತಿಯನ್ನು ಗೌರವಿಸುವ ಹಂಬಲವನ್ನು ಮತ್ತಷ್ಟು ಬಲಪಡಿಸಿದ್ದು, ಕನ್ನಡಿಗರ ಮನಸ್ಸಲ್ಲಿ ಅಭಿಮಾನ ತುಂಬುವಂತದ್ದಾಗಿತ್ತು.

Comments are closed.

Don`t copy text!