ಆಳಂದ: ಪಟ್ಟಣದಲ್ಲಿ ಬಿಎಸ್‍ಪಿ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ ಅವರು ಸಂಜಯ ಬೋಸ್ಲೆ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಪುನರಾಯ್ಕೆ ಘೋಷಿಸಿ ಇತರ ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿಕೊಟ್ಟರು.
ಆಳಂದ: ತಾಲೂಕಿನ ಶುಕ್ರವಾಡಿ ಗ್ರಾಮದ ಸಂಜಯ ಭೋಸ್ಲೆ ಅವರು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರಾಗಿ 2ನೇ ಬಾರಿಗೆ ಪುನರಾಯ್ಕೆಯಾದರು.
ಇದೇ ವೇಳೆ ಮಾತನಾಡಿದ ಸಂಜಯ ಭೋಸ್ಲೆ ಅವರು, ಪಕ್ಷವನ್ನು ತಳಮಟ್ಟದಿಂದ ಬೆಳೆಸಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಸಿದ್ಧತೆ, ಬೂತ್ ಕಮಿಟಿ ಕಾರ್ಯಗಳು ಮತ್ತು ಶಿಬಿರಗಳನ್ನು ಏರ್ಪಡಿಸುವ ಕುರಿತಾದ ಆಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಸಾಮಾಜಿಕ ನ್ಯಾಯ ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತ ಜನರಿಗಾಗಿ ಪ್ರತಿಭಟನೆ, ಭ್ರಷ್ಟಾಚಾರ ಅನ್ಯಾಯ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಆಳಂದ ವಿಧಾನಸಭಾ ಉಸ್ತುವಾರಿ ಮಹಾದೇವ ಧನ್ನಿ ಅವರು ಸಭೆಯಲ್ಲಿ ಚರ್ಚಿಸಿ ಬೋಸ್ಲೆ ಅವರ ಪುನರಾಯ್ಕೆ ಕುರಿತು ಘೋಷಣೆ ಕೈಗೊಂಡು ಜವಾಬ್ದಾರಿ ವಹಿಸಿಕೊಟ್ಟರು. ಅಲ್ಲದೆ, ನೂತನ ಅಧ್ಯಕ್ಷರಿಗೆ ಸಲಹೆ ಸೂಚನೆ ನೀಡಿದ ಅವರು, ಪ್ರತಿಯೊಂದು ವಾರ್ಡ್ ಗಳಲ್ಲಿ ಬೂತ ಕಮಿಟಿ ಮಾಡಿ ಶಿಬಿರವನ್ನು ನಡೆಸುವಂತೆ ಸೂಚಿಸಲಾಯಿತು. ಮುಂದೆ ಬರುವ ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ್ ಚುನಾವಣೆಗಳ ಸಿದ್ಧತೆಗಳನ್ನು ನಡೆಸುವಂತೆ ಸೂಚಿಸಿದರು.
ಆಗಮಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷ ಆನಂದ ಮಸ್ಕಿ, ರಾಜ್ಯ ಕಾರ್ಯದರ್ಶಿ ಡಾ. ಅನೀಲ ಟೆಂಗಳಿ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಮುದಗಲೆ, ಮಿಥುನ ಕೊಚ್ಚಿ, ಪರಮೇಶ್ವರ ಗಾಯಕವಾಡ, ಮಹಾದೇವ ಕಾಂಬ್ಳೆ, ನಾಗಪ್ಪ ವಗ್ಗನ ಉಪಸ್ಥಿತರಿದ್ದರು.
Comments are closed.