Shubhashaya News

ಕಾಮನಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಆಚರಣೆ

ಆಳಂದ: ಕಾಮನಳ್ಳಿ ಗ್ರಾಮದಲ್ಲಿ ನಡೆದ ರಾಜ್ಯೋತ್ಸವದಲ್ಲಿ ರಾಮಚಂದ್ರ ಅವರಳ್ಳಿ, ಸುರೇಶ ನೆಲ್ಲೂರ, ಸಂಜುಕುಮಾರ ಡೊಂಗರಾಂವ ಇತರರು ಉಪಸ್ಥಿತರಿದ್ದು, ರಾಜ್ಯೋತ್ಸವದಂದು ಜನಿಸಿದ ಭೋಗೇಶ ನೆಲ್ಲೂರ ಮಗುವಿಗೆ ಸನ್ಮಾನಿಸಲಾಯಿತು.

ಆಳಂದ: ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಯುವಕರು ಗ್ರಾಮಸ್ಥರು ಸೇರಿ ಸಂಭ್ರಮದ ಮಧ್ಯ ಅದ್ದೂರಿಯಿಂದ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಮಚಂದ್ರ ಅವರಳ್ಳಿ ಅವರು ಧ್ವಜಾರೋಹಣ ನೆರವೇರಿಸಿದರು. ಅಕ್ಕಲಕೋಟ ತಾಲೂಕಿನ ಸಲಗರ ಗ್ರಾಪಂ ಅಧ್ಯಕ್ಷ ಸಂಜುಕುಮಾರ ಡೋಂಗರಾಜೆ ನಾಡದೇವಿ ಭುವನೇಶ್ವರಿ ಭಾವಚಿತ್ರ ಪೂಜೆ ಸಲ್ಲಿಸಿದರು.
ವಿಶೇಷ ವಾಗಿ ಕರ್ನಾಟಕ ರಾಜ್ಯೋತ್ಸವ ದಿನದಂದು ಹುಟ್ಟಿದ ಭೋಗೇಶ ನೇಲ್ಲುರೆ ಅವರಿಗೆ ಗಣ್ಯರು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭ ದಲ್ಲಿ ಮಲ್ಲು ವಾಡೇದ, ಅಮೀನ ಕಾಮನಳ್ಳಿ, ಶಿವಲಿಂಗಪ್ಪ ಪಾಟೀಲ, ವಿಜಯಕುಮಾರ ಬೆಳಮಗಿ, ಮಲ್ಲು ಪಾಟೀಲ, ಬಸವರಾಜ ಹಡಲಗಿ, ಸುರೇಶ ಸರಡಗಿ, ಸುರೇಶ ನೆಲ್ಲೂರ ಉಪಸ್ಥಿತರಿಂದರು.

Comments are closed.

Don`t copy text!