Shubhashaya News

ಹಿರೋಳಿ ಗಡಿಯಲ್ಲಿ ಝೇಂಕರಿಸಿದ ಕನ್ನಡ ಭಾವುಟ

ಆಳಂದ: ಹಿರೋಳಿ ಗಡಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡದೇವಿ ಭುವನೇಶ್ವರಿ ಭಾವಚಿತ್ರ, ಕನ್ನಡ ಭಾವುಟದ ಭವ್ಯ ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದರು.

ಆಳಂದ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಹಿರೋಳಿ ಗ್ರಾಮಸ್ಥರು ಕರ್ನಾಟಕ ರಾಜ್ಯೋತ್ಸವ ಆಚರಿಸಿ ಗ್ರಾಮಸ್ಥರು ಶಾಲಾ ಮಕ್ಕಳೊಮದಿಗೆ ನಾಡದೇವಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ಸಡಗರ ಸಂಭ್ರಮದಿಂದ ಪ್ರಮುಖ ರಸ್ತೆಗಳ ಮೂಲಕ ಅದ್ಧೂರಿಯಾಗಿ ಆಚರಿಸಿ ಕನ್ನಡ ಭಾವುಟ ಮೆರೆದರು.
ಗ್ರಾಮ ಪಂಚಾಯತ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯೋತ್ಸವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಒಗ್ಗೂಡಿ ಅದ್ಧೂರಿಯಾಗಿ ಮೆರವಣಿಗೆ ಕೈಗೊಂಡರು.
ಕರವೇ ಗ್ರಾಮ ಘಟಕದ ಅಧ್ಯಕ್ಷ ಕಾಶಿನಾಥ ಎಸ್. ವಾಡೇದ, ಗ್ರಾಪಂ ಸದಸ್ಯರಾದ ಮಲ್ಲಿನಾಥ ಕವಲಗಿ, ಶಿವಲಿಂಗಯ್ಯಾ ಹಿರೇಮಠ, ಸೋಲಿಂಗ ಕವಲಗಿ, ರಾಮಚಂದ್ರ ಕಂಬಾರ, ಪ್ರದೀಪ ಸಿಂಧೆ, ಪ್ರಕಾಶ ನಾರಾಯಣಕರ್, ಶಾಲಾ ಮುಖ್ಯ ಶಿಕ್ಷಕ ಶ್ರೀಶೈಲ ಕಂಬಾರ, ಸಹ ಶಿಕ್ಷಕ ಸೂರ್ಯಕಾಂತ ಸರಸಂಬಾ, ಈರಣ್ಣಾ, ದೈಹಿಕ ಶಿಕ್ಷಕ ಯಮುನಪ್ಪಾ, ದೇವಾನಂದ ಹುಲುಗೇರಿ, ಸಾಗರ ಕಳಸೆ, ಸಚೀನ ಜವಳೆ, ಬಸವರಾಜ ಕೊರಳ್ಳಿ, ಮಲ್ಲಿನಾಥ ಉಡಗಿ, ಶಿಕ್ಷಕಿ ಶ್ರೀದೇವಿ, ದಲಿತ ಸೇನೆ ಆರ್ ಮುಖಂಡ ಶರಣು ಕವಲಗಾ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.
ಹಿರೋಳಿ ಗಡಿಸರಹದ್ದಿನಲ್ಲಿ ಕನ್ನಡ ಧ್ವಜಾರೋಹಣವನ್ನು ಕರವೇ ಅಧ್ಯಕ್ಷ ಕಾಶಿನಾಥ ವಾಡೇದ ನೆರವೇರಿಸಿದರು. ಆರಂಭದಲ್ಲಿ ಗ್ರಾಪಂ ಹಾಗೂ ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು.
ಶಾಲೆಯಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ನಾಡದೇವಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯನ್ನು ಸೋಮೇಶ್ವರ ದೇವಾಲಯದಿಂದ ಮತ್ತೆ ಶಾಲೆಯ ವರೆಗೆ ಭವು ಮೆರವಣಿಗೆ ಹಾಗೂ ಕನ್ನಡದ 200 ಮೀಟರ್ ಉದ್ದದ ನಾಡ ಧ್ವಜದೊಂದಿಗೆ ಪ್ರಮುಖ ಸ್ಥಳದಲ್ಲಿ ಮಕ್ಕಳ ಸಾಂಸ್ಕøತಿಕ ನೃತ್ಯ ಹೆಜ್ಜೆಹಾಕಿ ಅದ್ಧೂರಿಯಾಗಿ ಮೆರವಣಿಗೆ ಕೈಗೊಂಡು ಕನ್ನಡದ ಕಹಳೆಯೂದಿದರು.
ಬಳಿಕ ಶಾಲಾ ಆವರಣದಲ್ಲಿ ಮುಖ್ಯ ಶಿಕ್ಷಕ ಶ್ರೀಶೈಲ ಕಂಬಾರ ಅಧ್ಯಕ್ಷತೆಯಲ್ಲಿ ವೇದಿಕೆಯ ಸಮಾರಂಭ ನಡೆಯಿತು.

Comments are closed.

Don`t copy text!