Shubhashaya News

ಮಕ್ಕಳ ಸಮೃದ್ಧಿ ಜೀವನಕ್ಕೆ ಶಿಕ್ಷಣ ಸಂಸ್ಕಾರ ಕೊಡುಗೆ: ಬುಕ್ಕೆ

ಆಳಂದ: ಪಟ್ಟಣದ ಎಂಪಿಎಂಜಿ ಬಾಲಕಿಯರ ಪಿಯು ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ, ರಾಜಶೇಖರ ಕಡಗಣ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಕೆಕ್‍ಕತ್ತರಿಸಿ ಉದ್ಘಾಟಿಸಿದರು.

ಆಳಂದ: ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವ ಅಗತ್ಯವಿದ್ದು, ಶಿಕ್ಷಣವು ಬದುಕಿನ ಮೇಲ್ಮೈಯನ್ನು ಉತ್ತಮಗೊಳಿಸಲು ಪ್ರೇರಣೆ ನೀಡುತ್ತದೆ ಎಂದು ಪಟ್ಟಣದ ಎಂಪಿಎಂಜಿ ಪಿಯು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಅವರು ಹೇಳಿದರು.
ಜೀವನ ಜೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ತಡಕಲ್‍ನ ಪಟ್ಟಣದ ಎಂಪಿಎಂಜಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
“ಮಕ್ಕಳಿಗೆ ಸದ್ಭಾವನೆ, ಪರಿಶ್ರಮ ಮತ್ತು ಪ್ರಾಮಾಣಿಕತೆಯ ಹಿತಕರ ಮಾರ್ಗವನ್ನು ತೋರಿಸಬೇಕಾಗಿದೆ. ಅವರು ಮುಂದುವರೆದ ಪ್ರತಿಯೊಂದು ಹೆಜ್ಜೆಯಲ್ಲಿ ದೇಶಾಭಿಮಾನ ಮತ್ತು ಸಾಂಸ್ಕøತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಕ್ಕಳು ದೇಶದ ಭವಿಷ್ಯವೆಂದು ಪರಿಗಣಿಸಿ, ಅವರ ಶಿಕ್ಷಣದ ಹಕ್ಕುಗಳನ್ನು ಕಾಪಾಡಲು ನಾವು ಏನು ತಂತ್ರಗಳನ್ನು ರೂಪಿಸಬೇಕು ಎಂಬುದರ ಮೇಲೆ ಚಿಂತನೆ ನಡೆಸಬೇಕು. ಶಿಸ್ತು ಸಂಸ್ಕಾರದೊಂದಿಗೆ ತಂದುಕೊಂಡರೆ ಮಕ್ಕಳ ಭವಿಷ್ಯವನ್ನು ಉಜ್ವಲಗೊಳ್ಳುತ್ತದೆ. ಚಾಚಾ ನೆಹರು ಅವರ ಜೀವನವನ್ನು ಅಳವಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಅವರು ಒತ್ತು ಹೇಳಿದರು.
ಜೀವನ ಜೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ತಡಕಲ್ ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಪ್ರತಿನಿದಿ ಅಂಜಲಿ, ಸಿದ್ಧಮ್ಮ, ವೈಷ್ಣವಿ, ರಕ್ಷಿತಾ ಅವರಿಂದ ಕಾರ್ಯಕ್ರಮ ಕೆಕ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.
ಉಪನ್ಯಾಸಕ ರಾಜಶೇಖರ ಕಡಗಣ ಉಪನ್ಯಾಸ ನೀಡಿದರು. ಅತಿಥಿಗಳಾಗಿ ರವಿಂದ್ರ ಜಮಾದಾರ, ನಂದಿನಿ ಕಾಪ್ಟೆ, ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿನಾಥ ತುಕಾಣೆ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸಂಗಮೇಶ ಸ್ವಾಮಿ ನಿರೂಪಿಸಿದರು. ಸುಜಾತಾ ಗುತ್ತೇದಾರ ಸ್ವಾಗತಿಸಿದರು. ಅಂಬ್ರೇಶ ಕಾಂಬಳೆ ವಂದಿಸಿದರು.

Comments are closed.

Don`t copy text!