Shubhashaya News

BREAKING : ‘ವಕ್ಫ್’ ವಿವಾದ ಬೆನ್ನಲ್ಲೆ, ‘ಖಬರಸ್ತಾನಗಳಿಗೆ’ ಸರ್ಕಾರಿ ಭೂಮಿ ನೀಡಲು ಮುಂದಾದ ರಾಜ್ಯ ಸರ್ಕಾರ!

ರಾಜ್ಯದಲ್ಲಿ ಈಗಾಗಲೇ ‘ವಕ್ಫ್’ ವಿವಾದದಿಂದ ವಿಪಕ್ಷಗಳು ಹಾಗೂ ರೈತರು ಪ್ರತಿಭಟನೆ ಹೋರಾಟ ನಡೆಸುತ್ತಿದ್ದು, ಸಚಿವ ಜಮೀರ್ ಅಹ್ಮದ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದು, ಮುಸ್ಲಿಮರಿಗೆ ಖಬರಸ್ಥಾನಗಳಿಗೆ ಸರ್ಕಾರಿ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಹೌದು ಖಬರಸ್ಥಾನಗಳಿಗೆ ಸರ್ಕಾರಿ ಕಂದಾಯ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಕ್ಫ್ ವಿವಾದ ಬೆನ್ನಲ್ಲೇ ಇದೀಗ ಈ ಒಂದು ವಿಚಾರ ಮುನ್ನೆಲ್ಲೆಗೆ ಬಂದಿದೆ. ರಾಜ್ಯ ಸರ್ಕಾರದ ಆದೇಶವು ಖಬರಸ್ಥಾನಗಳಿಗೆ ಭೂಮಿ ನೀಡುವ ಯೋಜನೆಗೆ ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ರಾಜ್ಯದ 328 ಖಬರಸ್ಥಾನಗಳಿಗೆ ಭೂಮಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಜಮೀನನ್ನು ಮಂಜೂರಾತಿ ನೀಡಲು ಸರ್ಕಾರ ಮುಂದಾಗಿದೆ. ಸುಮಾರು 2075 ಎಕರೆ ಭೂಮಿಯನ್ನು ಮಂಜೂರಾತಿ ನೀಡಲು ಸರ್ಕಾರಿ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಭೂಮಿಯನ್ನು ಖಬರಸ್ಥಾನವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.

ಬೆಂಗಳೂರು, ರಾಯಚೂರು, ಕಲಬುರ್ಗಿ, ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಮಿ ನೀಡಲು ಸರ್ಕಾರ ಮುಂದಾಗಿದೆ. ವಕ್ಫ್ ಅಧೀನದ ಮಸೀದಿಯಲ್ಲಿರುವ ಖಬರಸ್ತಾನಗಳು ಹಾಗೂ ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ಥಾನಗಳಿಗೆ ಜಮೀನು ನೀಡಲು ಮುಂದಾಗಿದೆ.

ಈ ಕುರಿತು ಖಬರಸ್ಥಾನಗಳಿಗೆ ಭೂಮಿ ನೀಡುವಂತೆ ಸರ್ಕಾರ ಹಿಂದೆಯೇ ಆದೇಶ ನೀಡಿತ್ತು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸರ್ಕಾರ ಆದೇಶ ನೀಡಿತ್ತು. ಏಪ್ರಿಲ್ 16 ರಂದು ಸರ್ಕಾರದ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸೂಚಿಸಿದ್ದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರು ಸೂಚನೆ ನೀಡಿದ್ದರು.

ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯು ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರವನ್ನು 328 ಖಬರಸ್ತಾನಗಳಿಗೆ ಕಂದಾಯ ಭೂಮಿಯನ್ನು ಮಂಜುರಾತಿ ಮಾಡುವಂತೆ ಕೋರಿದ್ದರು. ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಾ. ಶಾಲಿನೀ ರಜನಿಶ್ ಸೂಚನೆ ನೀಡಿದ್ದರು. ಸರ್ಕಾರಿ ಭೂಮಿ ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ವಿತರಿಸಲು ಸೂಚನೆ ನೀಡಿದ್ದರು.

Comments are closed.

Don`t copy text!