ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಮೈಸೂರು ಪಾಲಿಕೆಯಲ್ಲಿ ಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಕೆ ಕುಮಾರ್ ನನ್ನು ವಜಾಗೊಳಿಸಿ ಮೈಸೂರು ಪಾಲಿಕೆ ಆಯುಕ್ತ ರೆಹ್ಮಾನ್ ಶರೀಫ್ ಆದೇಶ ಹೊರಡಿಸಿದ್ದಾರೆ. ಮುಡಾದಲ್ಲಿ ಅಕ್ರಮ ಸೈಟ್ ಮಾರಾಟದಲ್ಲಿ ಬಿಕೆ ಕುಮಾರ್ ಸಹ ಭಾಗಿಯಾಗಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಮೈಸೂರು ಪಾಲಿಕೆ ಆಯುಕ್ತರು,ಆತನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ಬಿಕೆ ಕುಮಾರ್ ವಜಾ ಮಾಡಿ ಮೈಸೂರು ಪಾಲಿಕೆ ಆಯುಕ್ತರು ಇದೀಗ ಆದೇಶ ಹೊರಡಿಸಿದ್ದಾರೆ. ಕಛೇರಿ ಕೆಲಸಕ್ಕಾಗಿ ಬಿಕೆ ಕುಮಾರ್ ಮುಡಾಗೆ ನೇಮಕವಾಗಿ ಬಂದಿದ್ದ. ಮುಡಾದಲ್ಲಿ ಕೆಲಸ ಮಾಡುತ್ತಾ ಪಾಲಿಕೆಯಿಂದಲೂ ಕೂಡ ಸಂಬಳ ಪಡೆಯುತ್ತಿದ್ದ. ಏಕಕಾಲದಲ್ಲಿ ಎರಡು ಸರಕಾರಿ ಕಚೇರಿಗಳಲ್ಲಿ ಬಿಕೆ ಕುಮಾರ್ ಕೆಲಸ ಮಾಡುತ್ತಿದ್ದ. ನಿಯಮ ಉಲ್ಲಂಘಸಿ ಎರಡು ಕಡೆ ವೇತನ ಪಡೆಯುತ್ತಿದ್ದ.
ಈ ಹಿನ್ನೆಲೆಯಲ್ಲಿ ಇದೀಗ ಆತನನ್ನು ವಜಾಗೊಳಿಸಲಾಗಿದೆ ಬಿಕೆ ಕುಮಾರ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇವಿನಕೊಪ್ಪ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಮುಡಾದ ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂದಿನ ಕಮಿಷನರ್ ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ. ಮುಡಾದಲ್ಲಿ ಸಂರಕ್ಷಿಸಿ ಇಡಲಾಗಿದೆ 8,000 ಸೈಟ್ಗಳ ಬಗ್ಗೆ ಕೂಡ ಆತನಿಗೆ ಮಾಹಿತಿ ಇತ್ತು.
50:50 ಅನುಪಾತ ನಿಯಮದಲ್ಲಿ ಈ ಸೈಟ್ ಮಂಜೂರು ಮಾಡಿದ ಆಯುಕ್ತರು ಮುಡಾ ಕಚೇರಿ, ಎಲ್ಲ ವಿಭಾಗದಲ್ಲೂ ಬಿ ಕೆ ಕುಮಾರ್ ಪಾರುಪತ್ಯ ನಡೆಸುತ್ತಿದ್ದ. ಹಿಂದಿನ ಆಯುಕ್ತಾರಾದ ನಟೇಶ್ ಹಾಗೂ ದಿನೇಶ್ ಕುಮಾರ್ ಗೆ ಅಕ್ರಮದಲ್ಲಿ ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಮೈಸೂರು ಪಾಲಿಕೆ ಆಯುಕ್ತರು ಇದೀಗ ಆತನನ್ನು ವಜಾ ಗೊಳಿಸಿ ಆದೇಶಿಸಿದ್ದಾರೆ.
ಇದೇ ವಿಚಾರಕ್ಕೆ ಇಡಿ ಅಧಿಕಾರಿಗಳು ಬಿಕೆ ಕುಮಾರನ್ನು ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಕ್ರಿಮಿನಲ್ ಕೇಸ್ ದಾಖಲಿಸುವುದನ್ನು ಬಾಕಿ ಇರಿಸಿ ಕೆಲಸದಿಂದ ಆತನನ್ನು ವಜಾ ಗೊಳಿಸಿದ್ದಾರೆ. ನವೆಂಬರ್ 6 ರಂದು ಪಾಲಿಕೆ ಆಯುಕ್ತ ರಹಮಾನ್ ಶರೀಫ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
Comments are closed.