ಆಳಂದ: ಪಟ್ಟಣದಲ್ಲಿ ನಡೆದ ಶ್ರೀ ಗುರುನಾನಕ ಅವರ ಜಯಂತಿ ಅಂಗವಾಗಿ ಭಾವಚಿತ್ರದ ಪೂಜೆಯನ್ನು ಹಿರಿಯ ಜೋದಾರಾಮ ಬಿ. ಅಡ್ವಾನಿ, ಪತ್ರಕರ್ತ ಮಹಾದೇವ ವಡಗಾಂವ, ಕಿಶೋರ ಕಿಶವಾನಿ ಇತರರ ನೆರವೇರಿಸಿ ಸಿಹಿ ವಿತರಣೆಗೆ ಚಾಲನೆ ನೀಡಿದರು.
ಗುರುನಾನಕರ ತತ್ವಗಳು ಭಾರತೀಯ ಸಾಂಸ್ಕøತಿಕ ಪರಂಪರೆಯನ್ನು ಬೆಳಗಿಸಿವೆ: ಅಡ್ವಾನಿ”
ಆಳಂದ: ಗುರುನಾನಕರ ತತ್ವಗಳು ಭಾರತೀಯ ಸಾಂಸ್ಕøತಿಕ ಪರಂಪರೆಯನ್ನು ಬೆಳಗಿಸಿವೆ ಅವರು ಯಾವುದೇ ಜಾತಿಗೆ ಸೀಮಿತವಾಗಿರದೆ ಇಡೀ ಮಾನವ ಕುಲಕ್ಕೆ ಸಾಮರಸ್ಯ ಬಂಧುತ್ವದ ಪಾಠಕಗಳನ್ನು ಹೇಳಿಕೊಟ್ಟಿದ್ದಾರೆ. ಅವರ ತತ್ವ ಮತ್ತು ಸಂದೇಶಗಳಂತೆ ನಾವೆಯಲ್ಲರು ಮುನ್ನೆಡೆಯಬೇಕಾಗಿದೆ ಎಂದು ಹಿರಿಯ ಉದ್ಯಮಿ ಸಿಂಧಿ ಸಮುದಾಯದ ಹಿರಿಯ ಮುಖಂಡ ಜೋದಾರಾಮ ಬಾಲಚಂದ್ರ ಅಡ್ವಾನಿ ಅವರು ಹೇಳಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿನ ಮಹಾಲಕ್ಷ್ಮೀ ಕಲೆಕ್ಸನ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಗುರುನಾನಕ ಅವರ 555ನೇ ಜಯಂತಿಯ ನಿಮಿತ್ತ ಗುರುನಾನಕರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಕೈಗೊಂಡು ಅವರು ಮಾತನಾಡಿದರು.
ಗುರುನಾನಕ ಅವರ ಸಾಂಸ್ಕøತಿಕ ಮತ್ತು ಧಾರ್ಮಿಕ ಕೃತಿಗಳನ್ನು ಪ್ರತಿಪಾದಿಸಿ ತತ್ವಗಳನ್ನು ನೀಡಿದ್ದು, ಅವರ ಜೀವನ ಮತ್ತು ಸಂದೇಶವು ಭಾರತೀಯ ಸಾಂಸ್ಕøತಿಕ ಪರಂಪರೆಯನ್ನು ಸಮೃದ್ಧಗೊಳಿಸಿದೆ. ಅವರು ನಮ್ಮನ್ನು ನಿಷ್ಕಳಂಕ ಪ್ರೀತಿ, ಸಹಾನುಭೂತಿ ಮತ್ತು ಧರ್ಮದ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲು ಪ್ರೇರೇಪಿಸಿದ್ದಾರೆ ಎಂದು ಹೇಳಿದರು.
ಗುರುನಾನಕ ಅವರ ಮಾರ್ಗದರ್ಶನದಲ್ಲಿ ದೇಶದ ಸಾಂಸ್ಕøತಿಕ ತತ್ವಗಳನ್ನು ಉಳಿಸಲು ಮತ್ತು ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಅಗತ್ಯವಾಗಿದೆ. “ಅವರು ಪಾರಮ್ಯ ಮತ್ತು ಸಹಿಷ್ಣುತೆ ಬಗ್ಗೆ ಸಾಕಷ್ಟು ಪಾಠಗಳನ್ನು ಕಲಿಸಿಕೊಟ್ಟಿದ್ದಾರೆ. ನಮಗೆ ಇಂದಿಗೂ ಅವರ ನೈತಿಕ ತತ್ವಗಳು ಪ್ರೇರಣೆಯಾಗಿವೆ. ಭಾರತೀಯ ಸಾಮಾಜಿಕ ನೈತಿಕತೆ ಹಾಗೂ ಧಾರ್ಮಿಕ ಒಗ್ಗಟ್ಟನ್ನು ಕಾಪಾಡಲು ಸರ್ಕಾರಗಳು, ಸಮಾಜ ಮತ್ತು ನಾಗರಿಕರ ಜವಾಬ್ದಾರಿಯನ್ನು ಪಾಲಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮಮದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಮಹಾದೇವ ವಡಗಾಂವ, ಎಚ್‍ಡಿಎಫ್‍ಸಿ ಶಾಖೆಯ ವ್ಯವಸ್ಥಾಪಕ ಸುನಿಲಕುಮಾರ ಎಸ್. ಪಂಡಿತ, ಉದ್ಯಮಿ ಸಂಜಯ ಎಸ್. ದೇಶಮುಖ, ವಿಶಾಲ್ ಎ. ಗಾಂಧಿ, ಕಿಶೋರ ಕೇಶವಾನಿ, ಮನೋಜ ಜೈನ್, ಮಿಥುನ ಚಿಂಚೋಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಯುವ ಉದ್ಯಮಮಿ ಸಾಹಿಲ್ ದೇವಾನಂದ ಅಡ್ವಾನಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ್ದ ಗುರುನಾನಕ ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ದಿನವೀಡಿ ಸಿಹಿ ವಿವರಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
Comments are closed.