Shubhashaya News

ಸಕಾಲಕ್ಕೆ ತಪಾಸಣೆ ಮಾಡಿಕೊಂಡು ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯಿರಿ

ಆಳಂದ: ಪಟ್ಟಣದ ಕರ್ಪೂರಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಸಂಸ್ಥೆ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರವನ್ನು ಟಿಎಚ್‍ಒ ಸುಶೀಲಕುಮಾರ ಅಂಬುರೆ ಉದ್ಘಾಟಿಸಿದರು. ಯೋಜನಾಧಿಕಾರಿ ಕೃಷ್ಣಪ್ಪ ಇತರರು ಇದ್ದರು.

ಆಳಂದ: ಸಾರ್ವಜನಿಕರು ಮುಂಜಾಗೃತವಾಗಿ ಕಾಲಕಾಲಕ್ಕೆ ಆರೋಗ್ಯವನ್ನು ತಪಾಸಣೆ ಕೈಗೊಂಡು ಅಗತ್ಯವಿದ್ದಲ್ಲಿ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುವುದರಿಂದ ಮಾನಿಸಿಕ ಮತ್ತು ಶಾರೀರಿಕವಾಗಿ ಸ್ವಾಸ್ಥ್ಯತೆ ತಂದುಕೊಳ್ಳಲು ಸಾಧ್ಯವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶಿಲಕುಮಾರ ಅಂಬರೆ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದ ಕರ್ಪೂರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಆಳಂದ ಹಾಗೂ ಕಾರ್ಮೆಲ್ ಪಬ್ಲಿಕ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು.
ಸಾರ್ವಜನಿಕರಿಗೆ ಆರೋಗ್ಯ ಸೇವೆಗಳ ಮಹತ್ವವನ್ನು ಹಾಗೂ ಅವರಿಗೆ ಉಚಿತವಾಗಿ ಸಿಗುತ್ತಿರುವ ಆರೋಗ್ಯ ಸೇವೆಗಳ ಬಗ್ಗೆ ಇದೇ ವೇಳೆ ಅವರು ಮಾಹಿತಿ ನೀಡಿದ ಅವರು, “ಆರೋಗ್ಯವೇ ನಮಗೆ ಸಾಕಷ್ಟು ಗರಿಷ್ಠ ಮೌಲ್ಯ ಹೊಂದಿದ ವಸ್ತು. ನಮ್ಮ ಆರೋಗ್ಯದ ಬಗ್ಗೆ ಸಮಯ ಸಮಯಕ್ಕೆ ಜಾಗರೂಕತೆಯಿಂದ ನೋಡಿಕೊಳ್ಳಬೇಕಾದ ಅಗತ್ಯವಿದೆ. ಈ ರೀತಿಯ ಉಚಿತ ಆರೋಗ್ಯ ಶಿಬಿರಗಳು ಬಹುಮಟ್ಟಿನಲ್ಲಿ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮತ್ತು ತಕ್ಷಣದ ಚಿಕಿತ್ಸೆಯ ಅವಕಾಶವನ್ನು ನೀಡುವ ಪ್ರಮುಖ ಅವಕಾಶವಾಗಿದೆ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಿಬಿರಗಳಲ್ಲಿ ಭಾಗವಹಿಸಿದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಆಸ್ಪತ್ರೆಯ ವೈದ್ಯರು ಮತ್ತು ತಜ್ಞರು ಸಿದ್ಧರಿದ್ದಾರೆ. ಸಕಲ ಆರೋಗ್ಯ ಸೇವೆಗಳು ಮುಕ್ತವಾಗಿ ಲಭ್ಯವಿರುವುದನ್ನು ಸದ್ಭಳಕೆಯಾಗಬೇಕು. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಮತ್ತು ಶ್ರೀಕ್ಷೇತ್ರ ಧರಮಸ್ಥಳದ ಸಹಕಾರದಿಂದ ಆಯೋಜಿಸಲಾದ ಈ ಶಿಬಿರವು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ತಕ್ಷಣದ ಚಿಕಿತ್ಸೆಯನ್ನು ನೀಡಲು ಪ್ರಾಮುಖ್ಯತೆ ನೀಡಲಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಕೃಷ್ಣಪ್ಪ ಅವರು ಮಾತನಾಡಿ ಸಂಸ್ಥೆಯ ಜನಪರ ಕಾರ್ಯಕ್ರಮಗಳ ಲಾಭಪಡೆಯುವಂತೆ ಹೇಳಿದರು.
ಶಿಬಿರವನ್ನು ಪುರಸಭೆ ಮಾಜಿ ಸದಸ್ಯ ಸೈಫಾನ ಜವಳೆ ಜೋತಿ ಬೆಳಗಿಸಿ ಚಾಲನೆ ನೀಡಿದರು. ಲೀಲಾಕ್ಷಿ, ಶ್ವೇತಾ ಫಾದರ್ ವಿಲಿಯಮ್, ದೀಪಕ್ ಟೊಮೇಸ ಭಾಗವಹಿಸಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ಮತ್ತು ಸೇವಾಪ್ರತಿನಿಧಿಗಳು ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಶಿಬಿರದಲ್ಲಿ ಸದಸ್ಯರಿಗೆ ಉಚಿತ ಕಣ್ಣು ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆ, ಬಿಪಿ ಶುಗರ ರೋಗಗಳ ಕುರಿತು ವೈದ್ಯರಿಂದಮ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮ ಅಧಿಕಾರಿ ರೇಣುಕಾ ವಂದಿಸಿದರು.

Comments are closed.

Don`t copy text!