Shubhashaya News

BREAKING : ‘APL’ ಕಾರ್ಡ್ ದಾರರಿಗೂ ‘ಗೃಹಲಕ್ಷ್ಮೀ’ ಹಣ ಬರುತ್ತೆ ಆದರೆ…! : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಸದ್ಯ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕುರಿತಂತೆ ವಿರೋಧ ಪಕ್ಷದವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಇದರ ಮಧ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಬಿಪಿಎಲ್ ರೆಕಾರ್ಡ್ ಹೊಂದಿರುವವರ ಜೊತೆಗೆ ಎಪಿಎಲ್ ಕಾರ್ಡ್ ಹೊಂದಿರುವವರೆಗೂ ಗೃಹಲಕ್ಷ್ಮಿ ಹಣ ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಗ್ರಹಲಕ್ಷ್ಮಿ ಹಣ ಬರುವುದಿಲ್ಲ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಿದರೂ ಗೃಹಲಕ್ಷ್ಮಿ ಕಂತುಗಳನ್ನು ಪಡೆಯುವುದು ಮುಂದುವರಿಯುತ್ತದೆ. ಪರಿಶೀಲನಾ ಪ್ರಕ್ರಿಯೆಯ ಬಳಿಕ ಬಿಪಿಎಲ್‌ನಿಂದ ಎಪಿಎಲ್‌ ಕಾರ್ಡ್‌ಗೆ ಶಿಫ್ಟ್‌ ಆದ ಕುಟುಂಬದ ಮನೆಯ ಯಜಮಾನಿ ಕೂಡ 2 ಸಾವಿರ ರೂಪಾಯಿ ಮಾಸಿಕ ಕಂತು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಡತನ ರೇಖೆಗಿಂತ ಮೇಲಿನ ಪಡಿತರ ಚೀಟಿ ಹೊಂದಿರುವ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂಪಾಯಿ ಹಣ ಪಡೆಯಲಿದ್ದಾರೆ.ಆದರೆ, ಇವರುಗಳು ಆದಾಯ ತೆರಿಗೆ ಪಾವತಿ ಮಾಡುವ ವ್ಯಕ್ತಿಗಳಾಗಿರಬಾರದು. ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ ಗೃಹಲಕ್ಷ್ಮೀ ಹಣ ಸಿಗೋದಿಲ್ಲ. ಗೃಹಲಕ್ಷ್ಮೀ ಹಣದ ವಿಚಾರದಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌ ಅನ್ನೋ ವಿಚಾರ ಲೆಕ್ಕಕ್ಕೆ ಬರೋದಿಲ್ಲ. ಆದಾಯ ತೆರಿಗೆ ಪಾವತಿ ಮಾಡುವವರು ಆಗಿರಬಾರದು ಎನ್ನುವ ನಿಯಮವಿದೆ ಎಂದು ಸ್ಪಷ್ಟನೆ ನೀಡಿದರು.

Comments are closed.

Don`t copy text!