Shubhashaya News

ಕರ್ನಾಟಕ ಉಪ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ NDA, 1 ಕಾಂಗ್ರೆಸ್ ಗೆಲುವು: ಚುನಾವಣೋತ್ತರ ಸಮೀಕ್ಷೆ

ಕರ್ನಾಟಕ ವಿಧಾನಸಭಾ ಉಪ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಎರಡರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಚುನಾವಣೋತ್ತರ ಸಮೀಕ್ಷೆಗಳಿಂದ ಬಹಿರಂಗಗೊಂಡಿದೆ.

ಇಂದು ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಗೆ ನಡೆದಂತ ವಿಧಾನಸಭಾ ಉಪ ಚುನಾವಣೆಯ ಮತದಾನೋತ್ತರ ಸಮೀಕ್ಷೆಯ ವರದಿಯನ್ನು ಪ್ರಕಟಿಸಲಾಗಿದೆ. ಪಿ-ಮಾರ್ಕ್ಸ್ ಸಮೀಕ್ಷೆಯಂತೆ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್, ಇನ್ನೆರಡು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುವುದಾಗಿ ತಿಳಿಸಿದೆ.

ಇನ್ನೂ ಹಿರಿಯ ವಾರ್ತಾ ವಾಚಕ ರಾಘವೇಂದ್ರ ಗಂಗಾವತಿ ಅವರ ಸಾರಥ್ಯದ ಚಾಣಕ್ಯ ಟೈಮ್ಸ್ 24X7 ಸಮೀಕ್ಷೆ ಕೂಡ ಪ್ರಕಟವಾಗಿದೆ. ಅದರಲ್ಲಿ ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವಂತ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಅಂತ ತಿಳಿಸಿದೆ.

ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಗೆಲ್ಲಲಿದ್ದಾರೆ. ಶಿಗ್ಗಾವಿ ಬಿಜೆಪಿ ಪಾಲಾಗುವುದಾಗಿ ಚಾಣಕ್ಯ ಟೈಮ್ಸ್ ಸಮೀಕ್ಷಾ ವರದಿ ತಿಳಿಸಿದೆ.

ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ಗೆಲುವು ಸಾಧಿಸುವುದಾಗಿಯೂ ರಾಘವೇಂದ್ರ ಗಂಗಾವತಿ ಅವರ ಸಾರಥ್ಯದ ಚಾಣಕ್ಯ ಟೈಮ್ಸ್ 24X7 ಚಾನಲ್ ಸಮೀಕ್ಷೆಯು ಹೇಳಿದೆ.

Comments are closed.

Don`t copy text!